ಗುರುರಾಜ ನಿಧನಕ್ಕೆ ಸಂತಾಪ
ಗುಲ್ಬರ್ಗ: ಸೇವಾ ಸಮಿತಿ ಉಪಾಧ್ಯಕ್ಷರಾಗಿದ್ದ ಗುರುರಾಜ ಹರಸೂರ ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವುದಕ್ಕೆ ಗುರುರಾಜ ಸೇವಾ ಸಮಿತಿಯು ನಗರದ ಜಗತನಲ್ಲಿ ಸಂತಾಪ ಸಭೆ ನಡೆಸಿತು. ಗುರುರಾಜ ಅವರ ಕೊಡುಗೆ ರಾಘವೇಂದ್ರ ಸ್ವಾಮಿ ಮಠಕ್ಕೆ ಅಪಾರವಾಗಿತ್ತು. ಗುರುರಾಜ ಸೇವಾ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಸಭೆಯಲ್ಲಿ ಸಮಿತಿ ಅಧ್ಯಕ್ಷ ನರಹರಿ ಪಾಟೀಲ್, ವಿಜಯಕುಮಾರ್ ಸಾಗನೂರ, ರಾಘವೇಂದ್ರರಾವ ಪತ್ತಾರ, ಹಣಮಂತರಾವ ಗೋಟೂರ, ಹಣಮಂತರಾವ ಜೇವರ್ಗಿ, ಭಾವುರಾವ ಮಾಡ್ಯಾಳಕರ್, ನೀಲಲೋಹಿತ, ಶ್ರೀಕಾಂತ, ಶಶಿಕಾಂತ, ಪವನ, ಅಶೋಕ ಪಾಲ್ಗೊಂಡಿದ್ದರು.