ನಾಳೆ 5001 ಮುತ್ತೈದೆಯರಿಗೆ ಉಡಿ ಕಾರ್ಯಕ್ರಮ
ಯಾದಗಿರಿ: ದೇಶದ ಧರ್ಮ ರಕ್ಷಣೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಆ.19ರಂದು ಬೆಳಗ್ಗೆ 11ಕ್ಕೆ ಶಹಾಪುರ ಪಟ್ಟಣದ ಚರಬಸವೇಶ್ವರ ದೇವಸ್ಥಾನದಲ್ಲಿ 5001 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು.
ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಸಲವೂ ಉಡಿ ತುಂಬುವ ಸಮಾರಂಭ ಮಾಡಲಾಗುತ್ತಿದೆ. ಇದು ನಾಲ್ಕನೇ ವರ್ಷದ ಸಮಾರಂಭವಾಗಿದೆ. ಅಂದು ಬೆಳಗ್ಗೆ ತಾಯಿ ಭುವನೇಶ್ವರಿ, ತಾಯಿ ಲಕ್ಷ್ಮಿಗೆ ಪೂಜೆ ಸಲ್ಲಿಸಿ ಮಹಿಳೆಯರಿಗೆ ಉಡಿ ತುಂಬಲಾಗುವುದು ಎಂದರು.