ಬಿಕ್ಷೇಶ್ವರ ಮಠದಲ್ಲಿ ಲಕ್ಷ್ಮೀ ಹೋಮ
ಯಾದಗಿರಿ: ತಾಲೂಕಿನ ಹೋರುಂಚ ಗ್ರಾಮದ ಹತ್ತಿರವಿರುವ ಬಿಕ್ಷೇಶ್ವರ ಮಠದಲ್ಲಿ ಶುಕ್ರವಾರ ಲೋಕ ಕಲ್ಯಾಣಾರ್ಥವಾಗಿ ಲಕ್ಷ್ಮೀ ಹೋಮವನ್ನು ನಡೆಯಿತು.
ಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಸ್ವಾಮೀಜಿ ಚಾಮನಳ್ಳಿ ನೇತೃತ್ವದಲ್ಲಿ ನಡೆದ ಹೋಮದ ಪೂಜಾ ಕೈಂಕರ್ಯಗಳನ್ನು ಸಿಕಂದ್ರಾಬಾದ್ನ ರಂಗನಾಥ ಮಹಾರಾಜ ಅವರ ತಂಡ ಅಚ್ಚುಕಟ್ಟಾಗಿ ಹೋಮ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ನಾಡಿನ ತುಂಬೆಲ್ಲಾ ಉತ್ತಮ ಮಳೆಯಾಗಿ ಕೆರೆ ಜಲಾಶಯ ತುಂಬಿ ರೈತಾಪಿ ವರ್ಗದಲ್ಲಿ ಸಂತಸ ಮೂಡಿದೆ.
ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿಲ್ಲ. ಕಾರಣ ಬರ ಎದುರಿಸುವಂತಾಗಿದೆ. ಲೋಕ ಕಲ್ಯಾಣಕ್ಕಾಗಿ ಲಕ್ಷ್ಮೀ ಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.