ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನಕ ಭವನ ನಿರ್ಮಾಣಕ್ಕೆ ಶಾಸಕರಿಗೆ ಮನವಿ

Rashmi Kasaragodu
Updated On : 19 Aug 2013, 11:46 am

ಜೇವರ್ಗಿ: ಪಟ್ಟಣದಲ್ಲಿ 1 ಕೋಟಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕುರುಬ ಸಮಾಜದ ಮುಖಂಡ ತಮ್ಮಣ್ಣ ಬಾಗೇವಾಡಿ ಅವರ ನೇತೃತ್ವದಲ್ಲಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಖಂಡರು ಶಾಸಕರಿಗೆ ಕಂಬಳಿ ಹೊದಿಸುವ ಮೂಲಕ ಸನ್ಮಾನಿಸಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕುರುಬ ಸಮಾಜಕ್ಕೆ ಸಮುದಾಯ ಭವನಗಳನ್ನು ನಿರ್ಮಿಸಬೇಕು, ತಾಲೂಕಿನಲ್ಲಿರುವ ಕುರುಬ ಸಮಾಜದ ಪ್ರಸಿದ್ಧ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಬೇಕೆಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಈರಣ್ಣ ಪೂಜಾರಿ ಕೊಡಚಿ, ಸಿದ್ದಪ್ಪಗೌಡ ಕೊಡಚಿ, ಈರಪ್ಪ ಜಂಗಳಿ, ಮಾಲಿಕಪ್ಪ ಹಿಪ್ಪರಗಿ, ಮಹಾಂತಪ್ಪ ಭಾಸಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement