ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯುತ್ ಅವ್ಯವಸ್ಥೆ; ವಿತರಣಾ ಕೇಂದ್ರಕ್ಕೆ ಮುತ್ತಿಗೆ

Rashmi Kasaragodu
Updated On : 19 Aug 2013, 11:45 am

ಯಾದಗಿರಿ: ವಿದ್ಯುತ್ ಅವ್ಯವಸ್ಥೆಯಿಂದ ಆಕ್ರೋಶಗೊಂಡ ಶಹಾಪುರ ತಾಲೂಕಿನ ಹತ್ತಾರು ಗ್ರಾಮಗಳ ರೈತರು ಭಾನುವಾರ ಖಾನಾಪುರದಲ್ಲಿರುವ 110 ಕೆವಿ ಸ್ಟೇಷನ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಹಾಪುರ ತಾಲೂಕಿನ ಖಾನಾಪುರ, ನಾಯ್ಕಲ್, ಕುರುಕುಂದಾ, ತಡಿಬಿಡಿ, ಕ್ಯಾತನಾಳ, ಕರಣಿಗಿ, ಚಟ್ನಳ್ಳಿ, ಗುಂಡಳ್ಳಿ, ತೇಕರಾಳ, ತಂಗಡಿಗಿ, ಮನಗನಾಳ, ಇಬ್ರಾಹಿಂಪೂರ, ಮರಮಕಲ್, ಗುರುಸುಣಿಗಿ, ಬಲಕಲ್, ನಾಲ್ವಡಿಗಿ, ಹುಂಡೇಕಲ್, ಟಿ.ವಡಗೇರಾ, ಗುಂಡಗುರ್ತಿ, ವಡಗೇರಾ ಮುಂತಾದ ಗ್ರಾಮಗಳ ನೂರಾರು ರೈತರು ವಿದ್ಯುತ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನೆಡೆಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಖಾನಾಪುರ 110 ಕೆವಿ ವಿದ್ಯುತ್ ಕೇಂದ್ರದಿಂದ ಸರಬರಾಜುತ್ತಿರುವ ವಿದ್ಯುತ್ ಕಳೆದ ಒಂದು ವಾರದಿಂದ ವಿದ್ಯುತ್ ಇಲ್ಲದೆ ಸುಮಾರು 22 ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಹಲವು ಬಾರಿ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನೆಕಾರರು ಜೆಸ್ಕಾಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
ಕಳೆದ ಒಂದು ವಾರದಿಂದ ವಿದ್ಯುತ್ ಇಲ್ಲದೆ ಕುಡಿಯುವ ನೀರು, ಹಿಟ್ಟಿನ ಗಿರಣಿ, ಖಾರದ ಮಷಿನ್ಗಳು, ಮೊಬೈಲ್ಗಳು ಸಂಪೂರ್ಣ ಬಂದ್ ಆಗಿವೆ. ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಂಡಿದೆ. ನೀರೆತ್ತುವ ಮೋಟಾರುಗಳು ಸ್ಥಗಿತಗೊಂಡಿವೆ. ಜೋಳದ ಹಿಟ್ಟು ಬೀಸಲು, ಖಾರಾ ಪುಡಿ ಮಾಡಿಸಲು, ಮೊಬೈಲ್ ಚಾರ್ಜ್ ಮಾಡಿಸಲು ಯಾದಗಿರಿ, ಶಹಾಪುರಗೆ ಹೋಗುವಂತಹ ಪರಿಸ್ಥಿತಿ ಬಂದೊದಗಿದೆ. ಕುರುಕುಂದಾ, ಚಟ್ನಳ್ಳಿ, ಬಲಕಲ್, ನಾಲ್ವಡಿಗಿ ಇತರ ಗ್ರಾಮಗಳಲ್ಲಿ ಟಿಸಿಗಳು ಸುಟ್ಟು ಒಂದು ತಿಂಗಳಾಗಿವೆ. ಗ್ರಾಮಗಳು ಒಂದು ತಿಂಗಳಿನಿಂದ ಕಗ್ಗತ್ತಲ್ಲಿ ಮುಳುಗಿವೆ. ಆದರೂ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ  ಎಂದು ಆರೋಪಿಸಿದರು.
ಸಮಸ್ಯೆ ಪ್ರಸ್ತಾಪ: ವಿಷಯ ತಿಳಿಯುತ್ತಿದ್ದಂತೆ ಜೆಸ್ಕಾಂ ಇಇ ನಾಗರಾಜ್, ಶಹಾಪುರ ಎಇಇ ಶಂಕರ ಗುತ್ತಿ, ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ವೀರಣ್ಣ ಮಗಿ ಸ್ಥಳಕ್ಕೆ ಭೇಟಿ ನೀಡಿದರು. ವಿವಿಧ ಗ್ರಾಮಗಳಿಂದ ಬಂದಿದ್ದ ಪ್ರತಿಭಟನೆಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಪ್ರತಿಭಟನಾನಿರತರು ಜೆಸ್ಕಾಂ ಅಧಿಕಾರಿಗಳ ಮುಂದೆ ಹಲವು ಸಮಸ್ಯೆಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಭರವಸೆ: ಖಾನಾಪುರಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಪೂರೈಕೆ, ಕುರುಕುಂದಾ, ಚಟ್ನಳ್ಳಿ, ಬಲಕಲ್, ನಾಲ್ವಡಿಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ಸುಟ್ಟಿರುವ ಟಿಸಿಗಳನ್ನು ಎರಡು ದಿನಗಳಲ್ಲಿ ಬದಲಿಸಿ ಸಮರ್ಪಕ ವಿದ್ಯುತ್ ಸರಬರಾಜುಗೆ ಕ್ರಮ ಕೈಗೊಳ್ಳುವುದಾಗಿ ಜೆಸ್ಕಾಂ ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಕುರುಕುಂದಾ ಗ್ರಾಪಂ ಅಧ್ಯಕ್ಷ ಶರಣಪ್ಪ, ಖಾನಾಪುರ ಗ್ರಾಪಂ ಅಧ್ಯಕ್ಷ ರಾಜಕುಮಾರ ಹೊರಮನಿ, ಬಸವರಾಜಪ್ಪ ಸಾಹುಕಾರ್, ಗೋವಿಂದಪ್ಪ ಕೊಂಚೆಟ್ಟಿ, ಹಣಮಂತ್ರಾಯ ಹುಡೇದ್, ಪರಶುರಾಮ ಕುರುಕುಂದಾ, ರಂಗಪ್ಪ ಕೊಂಚೆಟ್ಟಿ, ಬಸರೆಡ್ಡಿ, ರಂಗಪ್ಪ ಆಲೂರ, ಎ.ವೈ.ಪದ್ಮಾಕರ್, ಹಣಮಂತ್ರಾಯ ಕ್ಯಾತನಾಳ, ಪರಶುರಾಮ ಖಾನಾಪುರ, ಶರಣಪ್ಪ, ನೀಲಕಂಠರಾಯ ಸಾಹುಕಾರ, ಪಾಂಡುರಂಗ, ರಜಾಕ್, ಮರಿಲಿಂಗ, ಮಹಾದೇವರೆಡ್ಡಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement