ಶಾಲಾ ಮಕ್ಕಳ ಚಟುವಟಿಕೆ ಶ್ಲಾಘನೀಯ: ಗುಪ್ತಾ
ಗುಲ್ಬರ್ಗ: ಕ್ರೀಡಾಕೂಟ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಹಾಗೂ ಶಿಕ್ಷಕ ವೃಂದ ಪಾಲ್ಗೊಂಡು ಜಿಲ್ಲೆಗೆ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಜಶ್ರೀ ಸಿಮೆಂಟ್ ಕಾರ್ಖಾನೆ ಘಟಕ ಅಧ್ಯಕ್ಷ ಎಸ್.ಕೆ. ಗುಪ್ತಾ ಹೇಳಿದರು. 67ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮಳಖೇಡನ ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಾರ್ಖಾನೆಯ ಯೋಜನೆಗಳು, ಧ್ಯೇಯೋದ್ದೇಶಗಳು, ಅದರಿಂದ ದೇಶದ ಪ್ರಗತಿಗೆ ಪೂರಕವಾಗುವ ಯೋಜನೆಗಳನ್ನು ವಿವರಿಸಿದರು. ಕಾರ್ಖಾನೆ ರಕ್ಷಣಾ ದಳ, ಶಾಲಾ ಮಕ್ಕಳು, ಕಾಗಿಣಾ ಕೈಗಾರಿಕಾ ತರಬೇತಿ ಕೇಂದ್ರ ಮಕ್ಕಳಿಂದ ಪಥ ಸಂಚಲನ ನಡೆಯಿತು. ಮಕ್ಕಳಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು. ಶಾಲಾ ಮಂತ್ರಿ ಮಂಡಲ ಅಧ್ಯಕ್ಷೆ ಮೇಘಾ ಗುಪ್ತಾ ವಂದಿಸಿದರು. ಶಾಲಾ ಮುಖ್ಯಗುರು, ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.