ಸದಸ್ಯತ್ವ ನೋಂದಣಿಗೆ ಮನವಿ
ಜೇವರ್ಗಿ: ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಂಘದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ತಾಲೂಕಿನ ಎಲ್ಲ ಮುಸ್ಲಿಂ ಸರ್ಕಾರಿ ನೌಕರರು ಸದಸ್ಯತ್ವ ಮಾಡಿಕೊಳ್ಳಬೇಕೆಂದು ಸಂಘದ ತಾಲೂಕಾಧ್ಯಕ್ಷ ಹುಸೇನಬಾಷಾ ಮನವಿ ಮಾಡಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ, ನೌಕರರು ಎದುರಿಸುತ್ತಿರುವ ಕುಂದುಕೊರತೆಗಳ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿದ ನಂತರ ಅಧ್ಯಕ್ಷ ಹುಸೇನಬಾಷಾ ಅವರು ಕಡ್ಡಾಯವಾಗಿ ಸಮಾಜ ನೌಕರರು ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಿದರು. ಸಭೆಯಲ್ಲಿ ಗೌರಾವಾಧ್ಯಕ್ಷ ಅಬ್ದುಲ್ ಕರೀಮ ಕೂಡಿ, ಮಹೆಬೂಬ್ ಪಟೇಲ್, ನಬಿಸಾಬ್ ಜವಳಗಿ, ಚಾಂದಸಾಬ್, ಟಿಪ್ಪುಸುಲ್ತಾನ ಮುಖ್ತಿಯಾರ್, ಮಹ್ಮದ್ ನಾಸೀರ್, ಸದ್ದಾಂ, ಗುಲ್ಜಿಯಾ ಬೇಗಂ, ಗುಲಾಂ ರಸೂಲ್ ಸೇರಿದಂತೆ ಅನೇಕರು ಇದ್ದರು.