ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಳ್ಳಿಗಳಲ್ಲಿ ಗೃಹ ಉದ್ಯಮ ಸ್ಥಾಪಿಸಿಕೊಳ್ಳಿ: ರಾಠೋಡ

Rashmi Kasaragodu
Updated On : 19 Aug 2013, 11:46 am

ಗುಲ್ಬರ್ಗ: ಮಹಿಳೆಯರು ಕೇವಲ ಸಂಘಗಳನ್ನು ರಚನೆ ಮಾಡಿಕೊಂಡು ಸುಮ್ಮನೆ ಕುಳಿತುಕೊಳ್ಳದೇ, ಅಡುಗೆ ಮನೆಗೆ ಸೀಮಿತವಾಗದೆ ಯಾವುದಾದರೂ ಒಂದು ಕೌಶಲ್ಯಾಧರಿತ ತರಬೇತಿಯನ್ನು ಪಡೆದುಕೊಂಡು ಹಳ್ಳಿಗಳಲ್ಲಿ ಗೃಹ ಉದ್ಯಮವನ್ನು ಸ್ಥಾಪಿಸಿಕೊಳ್ಳಬೇಕು ಎಂದು ಕವನಳ್ಳಿ ತಾಂಡಾದ ಎಸ್ಡಿಎಂಸಿ ಅಧ್ಯಕ್ಷ ಹೇಮಚಂದ್ರ ರಾಠೋಡ ಕರೆ ನೀಡಿದರು.
ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಲ್ಲಿ(ಬ್ಯಾಚ್-2) ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ವಿಶ್ವ ಸೇವಾ ಮಿಷನ್ ಸಂಸ್ಥೆಯ ಸಹಯೋಗದಲ್ಲಿ ತಾಲೂಕಿನ ಕವನಳ್ಳಿ ತಾಂಡಾದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಏರ್ಪಡಿಸಿದ್ದ ಉದ್ಯಮಶೀಲತಾ ಜಾಗೃತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮರೆಪ್ಪ ನಂದಿಹಳ್ಳಿ, ಶ್ಯವರಬೇಗಂ, ಜಲಾನಯನ ಸಹಾಯಕ ಮಾಣಿಕಪ್ಪ ಕೋಟಿ, ಕವನಳ್ಳಿ ಗ್ರಾಮದ ಎಲ್ಲ ಸಂಘಗಳ ಸದಸ್ಯರು, ಗ್ರಾಮದ ಹಿರಿಯರು ಇದ್ದರು. ಜಲಾನಯನ ಸಹಾಯಕ ಮನೋಹರ್ ನಿರೂಪಿಸಿ, ವಂದಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement