ಎಸ್ಬಿಆರ್ ಶಾಲೆ ಮೇಲುಗೈ
ಗುಲ್ಬರ್ಗ: ಲೋಕಮಾನ್ಯ ಬಾಲಗಂಗಾಧರ ತಿಲಕರ 93ನೇ ಪುಣ್ಯತಿಥಿಯ ಅಂಗವಾಗಿ ಗುಲ್ಬರ್ಗದ ಮರಾಠಾ ಮಂಡಳದಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ನಗರದ ಎಸ್ಬಿಆರ್ ಶಾಲೆ ಮೇಲುಗೈ ಸಾಧಿಸಿದೆ. 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬಾಲಗೀತ, ರಾಷ್ಟ್ರನಾಯಕರ ಜೀವನಾಧಾರಿತ ಘಟನೆಯ ಭಾಷಣ ಸ್ಪರ್ಧೆ, ಸಂಸ್ಕೃತ ಶ್ಲೋಕ, ಭಗವದ್ಗೀತೆ ಪಠಣ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಅಮೂಲ್ಯ ರಾಜಾಪುರ, ಅಭಿನಯ ಕಲಶೆಟ್ಟಿ, ಪ್ರಾಂಚಿ ಅಂಬುರೆ, ಸಾಚಿ ಸತಲಕರ್, ವಿಜಯಲಕ್ಷ್ಮೀ ಕಾಳೆ, ಶಿವಶರಣ ವಾಲಿ, ಧನುಶ್ರೀ ವಾಲಿ, ಸಂಜನಾ ಡೊಂಗ್ರೆ, ಸುಶಾಂತ ಹಿರೇಮಠ, ಸೃಷ್ಟಿ ಕುಲಕರ್ಣಿ, ವೈಷ್ಣವಿ ಹಿರೇಮಠ, ಕೇಯೂರ ಬಾವಗಿ, ಸಂಕೇತ ಮುತ್ತಿನ, ಸಿದ್ದಾರ್ಥ ಪಾಟೀಲ್ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.