ಮಳೆ ಬೆಳೆಗಾಗಿ ಗ್ರಾಮದೇವತೆಗೆ ನೀರು
ಗುಲ್ಬರ್ಗ/ಶಹಾಬಾದ್: ಸನ್ನತಿ ಗ್ರಾಮದ ಗ್ರಾಮಸ್ಥರು ಗ್ರಾಮದ ರೈತರ ಹೊಲಗಳಿಗೆ ಒಳ್ಳೆ ಮಳೆಯಾಗಿ, ಬೆಳೆ ಚೆನ್ನಾಗಿ ಬರಲಿ ಎಂಬ ಹರಕೆಯೊಂದಿಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಮೆರವಣಿಗೆ ಮೂಲಕ ಸಾಗಿ ನೀರು ಸಮರ್ಪಿಸಿದರು. ಪ್ರತಿ ವರ್ಷದಂತೆ ಗ್ರಾಮಸ್ಥರು ಬೆಳಗ್ಗೆ ಸ್ನಾನ ಮಾಡಿ ಕೊಡಗಳಲ್ಲಿ ನೀರು ತುಂಬಿಕೊಂಡು ವಾದ್ಯ ಘೋಷಗಳೊಂದಿಗೆ ಜಯಘೋಷ ಮಾಡುತ್ತ ನೀರನ್ನು ಸಮರ್ಪಿಸಿದರು. ಇದರಿಂದ ಈ ವರ್ಷದಲ್ಲಿ ರೈತರಿಗೆ ಒಳ್ಳೆ ಮಳೆ ಬಂದು ಫಸಲು ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಗ್ರಾಮದವರಾಗ ಎಪಿಎಂಸಿ ಸದಸ್ಯ ಮಲ್ಲಿನಾಥ ಸಾಹು ಇತರರು ಇದ್ದರು.