'ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ'
ಯಾದಗಿರಿ: ವಿಶ್ವಕರ್ಮ ಸಮಾಜವು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಅಲ್ಲದೇ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉತ್ತರ ಕರ್ನಾಟಕ ಸಂಚಾಲಕ ವೀರೇಂದ್ರ ಇನಾಮದಾರ ಹೇಳಿದರು.
ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಯಾದಗಿರಿ ವಲಯದ ತಾಲೂಕು ಮತ್ತು ಹೋಬಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿ, ಮಾತನಾಡಿದರು. ವಿಶ್ವಕರ್ಮ ಪಂಚ ಕಸಬುಗಳ ಅಭಿವೃದ್ಧಿಗಾಗಿ ಪ್ರತ್ಯೇಕ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ವಿಶ್ವಕರ್ಮ ಸಮುದಾಯದವರನ್ನು ಸರ್ಕಾರವು ವಿವಿಧ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಮೂಲಕ ರಾಜಕೀಯ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದ್ದರು.
ಪ್ರಾಧಾನ್ಯತೆ: ವಿಶ್ವಕರ್ಮ ಸಮಾಜವು ಆರ್ಥಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. ದೇಶದ ಸಂಸ್ಕೃತಿಯನ್ನು ಬೆಳಸುತ್ತಿರುವ ವಿಶ್ವಕರ್ಮರಿಗೆ ಸಮಾಜದಲ್ಲಿ ಪ್ರಾಧಾನ್ಯತೆ ಸಿಗುತ್ತಿಲ್ಲ. ಹೀಗಾಗಿ ಯಾಂತ್ರೀಕೃತಿ ಕಾಲದಲ್ಲಿ ವಿಶ್ವಕರ್ಮರ ಪಂಚ ಕಸುಬುಗಳು ಕಳೆದು ಹೋಗುತ್ತಿವೆ. ಆದ್ದರಿಂದ ಸಮುದಾಯಕ್ಕೆ ನ್ಯಾಯ ಒದಗಿಸಲು ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.
ಅನುದಾನ: ಬೇಲೂರಿನಲ್ಲಿ ಜಕಾಣಾಚಾರ್ಯ ಅವರ ಮೂರ್ತಿ ಸ್ಥಾಪಿಸಬೇಕು. ವಿಶ್ವಕರ್ಮ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಕೊಳ್ಳಲು ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅಧಿಕಾರ ಹಾಗೂ ಅನುದಾನ ನೀಡಬೇಕು. ಜಾತಿ ಆಧಾರಿತ ಜನಗಣತಿ ಮಾಡಬೇಕು. ವಿಶ್ವಕರ್ಮ ಸಮುದಾಯದವರನ್ನು ವಿಧಾನ ಪರಿಷತ್ತು ಹಾಗೂ ನಿಗಮ ಮಂಡಳಿಗೆ ನಾಮ ನಿರ್ದೇಶನ ಮಾಡಬೇಕು. ಹಂಪಿ ಉತ್ಸವದ ವೇಳೆ ವಿಶ್ವಕರ್ಮ ಸಮಾಜದ ಪೀಠಾಧಿಪತಿಗಳನ್ನು ಗುರುತಿಸಬೇಕು. ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಮಹಾಸಭಾ ತಾಲೂಕ ಅಧ್ಯಕ್ಷ ಮಹೇಶ ವಿಶ್ವಕರ್ಮ ತಡಿಬಿಡಿ, ಶಿವಣ್ಣ ಹೂನ್ನುರ್, ಮೌನಪ್ಪ ವಿಶ್ವಕರ್ಮ ಠಾಣಗುಂದಿ, ಶೇಖರ ವಿಶ್ವಕರ್ಮ, ಬಸವರಾಜ ನಾಯ್ಕಲ್, ಮೌನೇಶ ಬಡಗೇರ್, ಶೇಖರ ಬಡಿಗೇರ, ಮನೋಹರ್ ಬಿಳ್ಹಾರ, ಮೋನರ್ ಸುತಾರ್, ರಾಜಶೇಖರ ಕಾರಪೆಂಟರ್, ತಿಪ್ಪಣ್ಣ ಹಳಿಗೇರಿ, ಬಸವರಾಜ ತಡಿಬಿಡಿ ಇದ್ದರು. ತಾಲೂಕು ಯುವ ಅಧ್ಯಕ್ಷರನ್ನಾಗಿ ನಾಗರಾಜ ಅಂಕಲಗಿ, ಲಕ್ಷ್ಮೀಕಾಂತ ಮಹಾಮನಿ (ಉಪಾಧ್ಯಕ್ಷ), ಪಾರ್ವತಿ (ತಾಲೂಕು ಅಧ್ಯಕ್ಷೆ) ಅವರನ್ನು ಆಯ್ಕೆ ಮಾಡಲಾಯಿತು.