ವಿಶ್ವಕರ್ಮ ಸಮುದಾಯ ಅಭಿವೃದ್ಧಿಗೆ ಸಂಘಟನೆ ಅವಶ್ಯ
ಕ.ಪ್ರ.ವಾರ್ತೆ, ಸೇಡಂ, ಆ.19
ವಿಶ್ವಕರ್ಮ ಸಮಾಜದಲ್ಲಿ ಸಂಘಟನೆ ಕೊರತೆ ಕಾಣುತ್ತಿದೆ. ತಾವು ಸಂಘಟಿತರಾದಾಗ ಮಾತ್ರ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ನಾಡೇಪಲ್ಲಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿರುವ ಜಗದ್ಗುರು ಮೌನೇಶ್ವರರ ಲೀಲಾಮೃತ ಹಾಗೂ ಅಧ್ಯಾತ್ಮ ಪ್ರವಚನದ 3ನೇ ದಿನವಾದ ಶನಿವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಕರ್ತ ಶಿವಕುಮಾರ ನಿಡಗುಂದ ಮಾತನಾಡಿ, ಸ್ವಾತಂತ್ರ್ಯದ ನಂತರವೂ ಪಾಶ್ಚಾತ್ಯ ಸಂಸ್ಕ ೃತಿಗೆ ಜನ ಮೊರೆಹೋಗುತ್ತಿದ್ದಾರೆ. ದೇಶದ ಸಂಸ್ಕ ೃತಿ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಧಾರ್ಮಿಕ, ಅಧ್ಯಾತ್ಮಿಕತೆ ಮತ್ತು ಸಾಂಸ್ಕೃತಿಕ ಪರಂಪರೆ ಪಸರಿಸುತ್ತಿರುವ ಪ್ರವಚನ ಕಾರ್ಯಕ್ರಮಗಳ ಕಾರ್ಯ ಸ್ತುತ್ಯಾರ್ಹ ಎಂದರು.
ಮನೋಹರ ವಿಶ್ವಕರ್ಮ ಹಾರ್ಮೋನಿಯಂ, ಶ್ರೀಶೈಲ್ ವಿಶ್ವಕರ್ಮ ತಬಲಾ ಸಾಥ ನೀಡಿದರು. ರಾಜೇಶ್ವರಿ ಪಂಚಾಳ ಸ್ವಾಗತ ಗೀತೆ ಹಾಡಿದರು. ಗುರುನಾಥ ವಿಶ್ವಕರ್ಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗಣಪತಿ ಬಡಿಗೇರ ನಿರೂಪಿಸಿದರು. ಮೋನಪ್ಪ ಕೆರಳ್ಳಿ ವಂದಿಸಿದರು. ಯಾದಯ್ಯ ತಾಡೂರ, ಬಸವರಾಜ ಬಡಿಗೇರ, ದೇವಿಂದ್ರಪ್ಪ ಪಂಚಾಳ, ಬಸವರಾಜ ಯಡಗಿ, ಈರಣ್ಣ ಟೆಂಗಳಿ, ದೇವಿಂದ್ರಾಚಾರ್ಯ, ನಾಗಣ್ಣ ಬಡಿಗೇರ ಸೇರಿದಂತೆ ಅನೇಕರು ಇದ್ದರು.