ಸಂಭ್ರಮದ ಜೀವೇಶ್ವರ ಜಯಂತಿ ಆಚರಣೆ
ಶಹಾಪುರ: ಸ್ಥಳೀಯ ಸ್ವಕುಳ ಸಾಳಿ ಸಮಾಜ ಬಾಂಧವರಿಂದ ಜೀವೇಶ್ವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಪಟ್ಟಣದ ಜೀವೇಶ್ವರ ಕಲ್ಯಾಣ ಮಂಟಪದಿಂದ ಜೀವೇಶ್ವರ ಗುಡಿಯವರೆಗೆ ಮೆರವಣಿಗೆ ಸಾಗಿತು. ನೂರಾರು ಜನರು ಪಾಲ್ಗೊಂಡಿದ್ದರು. ಲೇಜಿಮ್, ಕೋಲಾಟ ಮುಂತಾದ ನೃತ್ಯ ತಂಡಗಳು ಮೆರವಣಿಗೆ ಕಳೆತಂದಿದ್ದವು. ಸಮಾಜದ ಅಧ್ಯಕ್ಷ ಸಿದ್ದಣ್ಣ ಶಿರವಾಳ, ಉಪಾಧ್ಯಕ್ಷ ಪರಶುರಾಮ ಮಿರ್ಜಿ, ಕಾರ್ಯದರ್ಶಿ ಜನಾರ್ದನ ಮಾನು, ಮಲ್ಲಯ್ಯ ಫಿರಂಗಿ, ವಿಶ್ವನಾಥ ರಘು, ರವೀಂದ್ರ ದಂಡು, ಮಲ್ಲಿಕಾರ್ಜುನ ಚಿಲ್ಲಾಳ, ಸುನೀಲ ಮಾನು, ಸಿದ್ದಪ್ಪ ಕೆಂದುಳೆ, ಗುರುನಾಥ ರಘು, ಗೋಪಾಲ ಶಿರವಾಳ, ಪ್ರವಿಣ ಪಿರಂಗಿ, ನಂದು ಚಿಲ್ಲಾಳ ಇತರರು ಇದ್ದರು.