ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಐಟಿಐ: ನೇರ ಸುತ್ತಿನ ಪ್ರವೇಶ

Rashmi Kasaragodu
Updated On : 21 Aug 2013, 12:11 pm

ಗುಲ್ಬರ್ಗ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಪು) ಪ್ರವೇಶ ಬಯಸಿ ಆನ್ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿ ಪ್ರವೇಶ ಸಿಗದಿರುವ ಮತ್ತು ಹೊಸದಾಗಿ ಪ್ರವೇಶ ಬಯಸುವ ಅಭ್ಯರ್ಥಿಗಳಿಂದ ಖಾಲಿ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇರ (ಕ್ಯಾಜುವೆಲ್) ಸುತ್ತಿನ ಪ್ರವೇಶವನ್ನು ಮೆರಿಟ್ ಕಮ್ ರಿಸರ್ವೇಶನ್ ಆಧಾರದ ಮೇಲೆ ಆ.24 ರಂದು ಬೆಳಿಗ್ಗೆ 11ಕ್ಕೆ ಹಂಚಿಕೆ ಮಾಡಲಾಗುವುದು. ಇಚ್ಛೆಯುಳ್ಳ ವಿದ್ಯಾರ್ಥಿಗಳು ಆ.23 ರೊಳಗಾಗಿ ಖಾಲಿ ಸ್ಥಾನಗಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಪ್ರಾಚಾರ್ಯ ಶಂಕರ ಎನ್. ಪಾಂಚಾಳ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಗ್ರಾಪಂ ನೌಕರರ ಸಂಘಕ್ಕೆ ಸುಧಾಕರ್
ಗುಲ್ಬರ್ಗ:  ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ನೂತನ ಕಾರ್ಯದರ್ಶಿಯನ್ನಾಗಿ ಸುಧಾಕರ್ ಬಿ. ಸಿಂದಗಿಕರ್ ರಾಜಾಪುರ ಅವರನ್ನು ಈಚೆಗೆ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸಂಘದ ರಾಜ್ಯ ಖಜಾಂಚಿ ವೇದಾಂಗ ತುಪ್ಪದ್ ತಿಳಿಸಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಅವರ ಸೂಚನೆಯ ಮೇರೆಗೆ ಜಿಲ್ಲಾಧ್ಯಕ್ಷ ತಿಪ್ಪಣ್ಣ ಕಂಗಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಪದಾಧಿಕಾರಿಗಳಾದ ರಾಚಯ್ಯ ಸ್ವಾಮಿ ಅಲ್ಲೂರ್, ಬಾಬು ಬಡಿಗೇರ, ನಿಂಗಪ್ಪ ನಾಮದಾರ, ಕಲ್ಯಾಣಿ ಏರಿ, ಶರಣಪ್ಪ ಪೂಜಾರಿ, ದೇವಿಂದ್ರಪ್ಪ ಸುಂಟನೂರ್, ಶಿವಶಂಕ್ರಯ್ಯ ಸ್ವಾಮಿ ಚಿಂಚೋಳಿ, ಸಿದ್ದಮ್ಮ ಮಾಲಗತ್ತಿ ಉಪಸ್ಥಿತರಿದ್ದರು.
'ಕನ್ನಡ ನನ್ನ ಹೃದಯದ ಭಾಷೆ'
ಗುಲ್ಬರ್ಗ: ಕನ್ನಡ ನಮ್ಮ ಭಾಷೆ, ಅದು ಅಮ್ಮನ ಭಾಷೆ, ಅದುವೇ ನನ್ನ ಹೃದಯದ ಭಾಷೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾರ್ಮಿಕವಾಗಿ ಹೇಳಿದರು. ನಗರದ ದೊಡ್ಡಪ್ಪ ಅಪ್ಪ ವಸತಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಆಗಮಿಸಿ ಮಾತನಾಡಿದರು. ನಮ್ಮ ತಾಯಿ ನಾಡಿನ ಅಭಿವೃದ್ಧಿಗಾಗಿ ನಾವು ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹೋಮ ಹವನ
ಗುಲ್ಬರ್ಗ: ಇಲ್ಲಿನ ಬ್ರಹ್ಮಪುರ ಬಡವಾಣೆಯ ದತ್ತ ಮಂದಿರ ಬಳಿ ಇರುವ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮೀತಿ ಅಡಿಯಲ್ಲಿ ಯಜ್ಞೋಪವೀತ ಧಾರಣ ಹೋಮಹವನ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೂತನವಾಗಿ ಉಪನಯನ ಮಾಡಿಕೊಂಡಿದ್ದ ವಟುಗಳು, ಅವರ ಪಾಲಕರು, ಬಂಧುಗಳು ಭಾಗವಹಿಸಿದ್ದರು. ಮಂಗಳವಾರ ಬೆಳಿಗ್ಗೆ 7ಕ್ಕೆ ಯೋಗೀಶ್ವರ ಯಾಜ್ಞವಲ್ಕ್ಯ ಸಭಾ ಭವನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿಪ್ರರು ಸೇರಿಕೊಂಡು ಧಾರ್ಮಿಕ ವಿಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement