ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಿತವಾಗಿ ಇಂಧನ ಬಳಸಿ: ಜಿಲ್ಲಾಧಿಕಾರಿ

Rashmi Kasaragodu
Updated On : 21 Aug 2013, 12:10 pm

ಗುಲ್ಬರ್ಗ: ಭೂಮಿಯಲ್ಲಿ ದೊರೆಯುವ ಇಂಧನ ಮೂಲಗಳು ಕ್ಷೀಣಿಸುತ್ತಿದ್ದು, ಅವು ಎಂದಾದರೊಂದು ದಿನ ಕೊನೆಗೊಳ್ಳಬಹುದು. ಇದಕ್ಕೆ ಪರ್ಯಾಯವಾಗಿ ಬದಲಿ ಮೂಲವನ್ನು ಕಂಡುಕೊಳ್ಳಬೇಕು. ಲಭ್ಯವಿರುವ ಇಂಥ ವನವನ್ನು ಸಂರಕ್ಷಿಸಿಕೊಳ್ಳುವುದು ಹಾಗೂ ಪರಿಸರ ಸಂರಕ್ಷಣೆಯೊಂದಿಗೆ ಮಿತವಾಗಿ ಇಂಧನ ಬಳಸಲು ಹಾಗೂ ನವೀಕರಿಸುವ ಇಂಧನಗಳ ಉಪಯೋಗದ ಕುರಿತು ಪ್ರಚಾರ ಮಾಡಲು ರಾಜೀವಗಾಂಧಿ ಅಕ್ಷಯ ಉರ್ಜಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹೇಳಿದರು. ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜೀವಗಾಂಧಿ ಅಕ್ಷಯ ಉರ್ಜಾ ದಿನಾಚರಣೆಯಲ್ಲಿ ಮಾತನಾಡಿದರು.  ಜಿಪಂ ಸಿಇಒ ಪಲ್ಲವಿ ಆಕುರಾತಿ ಮಾತನಾಡಿ, ನವೀಕರಿಸುವ ಇಂಧನ ಉಪಯೋಗಗಳ ಕುರಿತು ಮಾಹಿತಿ ಪ್ರಚಾರಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲೆಯ ಅಟಲ್ ಬಿಹಾರ ವಾಜಪೇಯಿ ಜನಸ್ನೇಹಿ ಕೇಂದ್ರಗಳಲ್ಲಿ ಸೌರಶಕ್ತಿಯಿಂದಲೇ ವಿದ್ಯುತ್ ಉತ್ಪಾದಿಸಿ ಉಪಯೋಗಿಸಲಾಗುತ್ತಿದೆ. ಎಲ್ಲ ಗ್ರಾಪಂ ಹಾಗೂ ತಾಪಂ ಕಚೇರಿಗಳಲ್ಲಿಯೂ ಸೌರಶಕ್ತಿ ಮೂಲಕವೇ ವಿದ್ಯುತ್ ಬಳಸಿಕೊಳ್ಳುವ ಯೋಜನೆ 13ನೇ ಹಣಕಾಸು ಆಯೋಗದಡಿಯಲ್ಲಿ ಅನುಷ್ಠಾನಗೊಳಿಸಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement