'ಸಂಪ್ರದಾಯದಲ್ಲಿ ಬದಲಾವಣೆ ಬೇಡ'
ಹುಣಸಗಿ: ಗಡಿಬಿಡಿಯ ಜೀವನದಲ್ಲಿ ಸಂಸ್ಕಾರವನ್ನು ಮರೆತು, ಅನಿಷ್ಠ ಸಂಪ್ರದಾಯಗಳನ್ನು ಒಪ್ಪಿಕೊಂಡು ಅದನ್ನೇ ಹೊಸ ಬದಲಾವಣೆ ಎಂದು ಹೇಳುವುದು ಮೂರ್ಖತನದ ಸಂಕೇತ ಎಂದು ಕೊಡೇಕಲ್ ಛಾಯಾ ಭಗವತಿ ಕ್ಷೇತ್ರದ ಪುರೋಹಿತ ಜಗನ್ನಾಥಾಚಾರ್ಯ ಪುರೋಹಿತ್ ಹೇಳಿದರು.
ಸಮೀಪದ ಕಾಮನಟಗಿಯಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಸಂಘದ ಆಶ್ರಯದಲ್ಲಿ ನೂಲ ಹುಣ್ಣಿಮೆಯ ಪ್ರಯುಕ್ತ ನಡೆದ ಉಪಾಕರ್ಮದಲ್ಲಿ ಅವರು ಮಾತನಾಡಿದರು. ಸಂಸ್ಕಾರಹೀನ ಮನೆಗಳ ಪರಿವರ್ತನೆಯಲ್ಲಿ ನಾವುಗಳು ತೊಡಗಿಸಿಕೊಂಡು, ಇದನ್ನೇ ಸಂಸ್ಕೃತಿಯೆಂದು ತಿಳಿದಿದ್ದೇವೆ. ವೇದ ಮಂತ್ರಗಳು, ಜಲಮೂಲ, ಪ್ರಕೃತಿಗೆ ನಿತ್ಯ ಪೂಜಿಸುವ ನಮ್ಮ ಅಹ್ನಿಕಗಳು ಸರ್ವ ಶ್ರೇಷ್ಠ ಎಂದರು.
ಹಣಮಂತಾಚಾರ್ಯ ಪುರೋಹಿತ್ ಮಾತನಾಡಿದರು. ಯಜ್ಞೋಪವೀತ ಧಾರಣೆ- ದೇವತಾ ಆಹ್ವಾನ, ಉಪಾಕರ್ಮ ಹೋಮ, ಗಾಯತ್ರಿ ಜಪ, ಗೋಧೂಮಪಿಷ್ಠ, ಪಂಚಗವ್ಯ ಸೇವನೆ, ಸಂಧ್ಯಾ ವಂದನೆ, ದಕ್ಷಿಣ ಅರ್ಪಣೆ, ಮಹಾ ಮಂಗಳಾರತಿ, ಮಹಾಪ್ರಸಾದ ಕಾರ್ಯಕ್ರಮಗಳು ನಡೆದವು. ನರಸಿಂಗರಾವ್ ಕುಲಕರ್ಣಿ, ಭೀಮಾಶಂಕರರಾವ್ ದ್ಯಾಮನಹಾಳ, ದತ್ತಾತ್ರೇಯರಾವ ಜಗಾಗೀರದಾರ್, ಚಂದುರಾವ್ ಕಾಮನಟಗಿ, ರಾಘವೇಂದ್ರ ಕಾಮನಟಗಿ, ವೆಂಕಟೇಶ ಜೋಷಿ, ವಿಜಯ ಬೈಚಬಾಳ, ಗೊಲ್ಲಾಳ ಭಟ್ಟ ಜೋಷಿ, ಬಸವಂತ್ರಾವ್ ನಾಗೂರ್, ರಾಮರಾವ್ ದ್ಯಾಮನಾಳ, ಬಲಭೀಮರಾವ ಕುಲಕರ್ಣಿ, ದೇವರಾಜ ದ್ಯಾಮನಹಾಳ, ಮಾರುತಿ ಜಹಾಗೀರದಾರ ದ್ಯಾಮನಹಾಳ ಇತರರು ಇದ್ದರು.