ಸಸಿ ನೆಟ್ಟು ರಾಜೀವ್ ಗಾಂಧಿ ದಿನಾಚರಣೆ
ಗುಲ್ಬರ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಾಜೀವ ಗಾಂಧಿ ಅಕ್ಷಯ ಉರ್ಜಾ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಜಿಪಂ ಸಿಇಒ ಪಲ್ಲವಿ ಆಕುರಾತಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. ಯೋಜನಾ ನಿರ್ದೇಶಕ ಎಸ್.ಎಂ. ಕೆಂಚಣ್ಣನವರ್, ಸಹಾಯಕ ಯೋಜನಾ ಅಧಿಕಾರಿ ಎಸ್.ಎಂ.ಅಳ್ವಿ, ಎಇ ಸೂರ್ಯಕಾಂತ ಪಾಟೀಲ್, ತಾಲೂಕು ಆರೋಗ್ಯ ಅಧಿಕಾರಿಗಳು ಶಿವಶರಣಪ್ಪ ಭುಸನೂರ, ಪ್ರಾದೇಶಿಕ ಅರಣ್ಯ ಅಧಿಕಾರಿ ಸಿ.ಎಂ. ಅರಿಕೇರಿ, ಅರಣ್ಯಾಧಿಕಾರಿ ಗುರುಶಾಂತಪ್ಪ, ವೈದ್ಯಾಧಿಕಾರಿ ಬಾಬುರಾವ ಚವ್ಹಾಣ, ವಿಶ್ವ ಸೇವಾ ಮಿಷನ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಹಾಗೂ ಜಿಪಂ ಡಿಆರ್ಡಿಎ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.