ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಲ್ಲೂರ ಕೆ. ಶಾಲೆಗೆ 260 ಗ್ಲಾಸ್ ದೇಣಿಗೆ

Rashmi Kasaragodu
Updated On : 22 Aug 2013, 11:19 am

ಚಿತ್ತಾಪುರ: ತಾಲೂಕಿನ ಅಲ್ಲೂರ ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೀರಯೋಜನೆಯಲ್ಲಿ ಮಕ್ಕಳಿಗೆ ಹಾಲು ಕುಡಿಯಲು 260 ಗ್ಲಾಸ್ಗಳನ್ನು ಗ್ರಾಮದ ಮುಖಂಡ ಶಾಂತಗೌಡ ದೇಣಿಗೆ ನೀಡಿದರು. ದೇಣಿಗೆ ನೀಡಿ ಮಾತನಾಡಿದ ಶಾಂತಗೌಡ, ಶಾಲೆಯ ಅಭಿವೃದ್ಧಿಗೆ ಗ್ರಾಮದ ಮುಖಂಡರು ಸಹಾಯ ಸಹಕಾರ ನೀಡುತ್ತಾರೆ. ಆದರೆ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಗಮನಹರಿಸಬೇಕೆಂದು ಹೇಳಿದರು. ವೆಂಕನಗೌಡ ಪಾಟೀಲ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ಗುತ್ತೇದಾರ, ಗುಂಡು ಕುಲಕರ್ಣಿ, ಶರಣು ಹೂಗಾರ, ವೀರುಪಾಕ್ಷಿರಡ್ಡಿ, ಶೇಖರಗೌಡ, ದೇವಿಂದ್ರಪ್ಪ ನರಬೋಳಿ, ಮುಖ್ಯಗುರು ಸುರೇಶಕುಮಾರ್ ಇತರರು ಉಪಸ್ಥಿತರಿದ್ದರು.
ಮಕ್ಕಳಿಗೆ ಹಾಲಿನ ಲೋಟಗಳ ದೇಣಿಗೆ
ಆಳಂದ: ತಾಲೂಕಿನ ಚಿಂಚೋಳಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ಷೀರಭಾಗ್ಯ ಯೋಜನೆಗೆ ಮುಖಂಡ ಶಿವಶರಣಪ್ಪ ಪಾಟೀಲ್ ಅವರು 101 ಲೋಟಗಳನ್ನು ದೇಣಿಗೆ ನೀಡಿದರು. ಮುಖ್ಯೋಪಾದ್ಯಾಯ ಲಾಲಭಾಷಾ ನಿರಗುಡಿ, ಸಹ ಶಿಕ್ಷಕ ವಿಜಯಕುಮಾರ್ ಪೋಮಾಜಿ ಅವರು ದೇಣಿಗೆ ಸ್ವೀಕರಿಸಿ, ದಾನಿಗಳ ಪರೋಪಕಾರ ಸೇವೆಯನ್ನು ಗುಣಗಾನ ಮಾಡಿ ಸನ್ಮಾನಿಸಿದರು. ಎಸ್ಡಿಎಂಸಿ ಅಧ್ಯಕ್ಷ ಪೃಥ್ವಿರಾಜ ಪಾಟೀಲ್, ಸದಸ್ಯ ಸೂರ್ಯಕಾಂತ ಜಮಾದಾರ, ಜೀತೇಂದ್ರ ಪಾಟೀಲ್, ದತ್ತಪ್ಪ ಕಣ್ಣಿ, ಸೋಮನಾಥ ಪಾಟೀಲ್, ಶಿಕ್ಷಕ ರಾಘವೇಂದ್ರ ಗೌಡ, ನಿಂಗಣ್ಣ ಕಣಮೇಶ್ವರ, ಶ್ರೀಶೈಲ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಂದು, ನಾಳೆ ಕ್ರೀಡಾಕೂಟ
ಚಿತ್ತಾಪುರ:  2013-14ನೇ ಸಾಲಿನ ಚಿತ್ತಾಪುರ ತಾಲೂಕಿನ ಹೋಬಳಿ ಮಟ್ಟದ ಕ್ರೀಡಾಕೂಟಗಳು ಆ. 22 ರಿಂದ 24ರವರೆಗೆ ನಡೆಯಲಿವೆ ಎಂದು ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮಣ ಲೋಡ್ಡನೋರ ತಿಳಿಸಿದ್ದಾರೆ.
ಫ್ರೌಡ ಶಾಲಾ ವಿಭಾಗದ ಕ್ರೀಡಾಕೂಟಗಳು:  ಚಿತ್ತಾಪುರ ಹೋಬಳಿ: ಆ. 23 ಹಾಗೂ 24ರಂದು. ಸ್ಥಳ  ಸರ್ಕಾರಿ ಫ್ರೌಡಶಾಲೆ ದಿಗ್ಗಾಂವ. ನಾಲವಾರ ಹೋಬಳಿ: ಆ.23 ಹಾಗೂ 24 ರಂದು. ಸ್ಥಳ. ಎಸಿಸಿ ಮೈದಾನ ವಾಡಿ(ಜಂ) ಗುಂಡಗುರ್ತಿ ಹೋಬಳಿ: ಆ.22, 23ರಂದು. ಸ್ಥಳ. ಸರ್ಕಾರಿ ಪ್ರೌಢಶಾಲೆ ಮಾಡಬೂಳ. ಪ್ರಾಥಮಿಕ ಶಾಲೆ ವಿಭಾಗ: ಚಿತ್ತಾಪುರ ಹೋಬಳಿ. ಆ.27, 28ರಂದು. ಸ್ಥಳ. ಶಿಶುವಿಹಾರ ಮೈದಾನ ಚಿತ್ತಾಪುರ.                                
'ಕ್ಷೀರಭಾಗ್ಯ' ಉದ್ಘಾಟನೆ
ಗುಲ್ಬರ್ಗ: ಜೇವರ್ಗ ತಾಲೂಕಿನ ಆಂದೋಲಾ ಗ್ರಾಮದಲ್ಲಿ ಸರ್ಕಾರದ ಹೊಸ ಯೋಜನೆ ಕ್ಷೀರಭಾಗ್ಯ ಯೋಜನೆಗೆ ಚಾಲನೆ ಹಾಗೂ ಸ್ತನಪಾನ ಸಪ್ತಾಹ ಆಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು. ಜಿಲ್ಲಾ ಪಂಚಾಯತಿ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. 6 ತಿಂಗಳಿನಿಂದ 6 ವರ್ಷದ ಮಕ್ಕಳ ತಾಯಂದಿರು, ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.  ವಲಯ ಮೇಲ್ವಿಚಾರಕಿ ಜ್ಯೋತಿ ಎಂ. ಬಮ್ಮನಳ್ಳಿ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement