ಇಂದು ಆರೋಗ್ಯ ಶಿಬಿರ
ಗುಲ್ಬರ್ಗ: ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ಸ್ಮಾರ್ಟ್ಕಾರ್ಡ್ ಹೊಂದಿರುವ ಫಲಾನುಭವಿಗಳ ಆರೋಗ್ಯ ತಪಾಸಣಾ ಶಿಬಿರವನ್ನು ಆಳಂದ ತಾಲೂಕಿನ ನರೋಣಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ.22 ರಂದು ಬೆಳಗಿನ 10ರಿಂದ ಸಂಜೆ 5ರವರೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಆ ಯೋಜನೆಯಡಿ ನೋಂದಣಿಯಾದ ಫಲಾನುಭವಿಗಳಿಗೆ ಶಿಬಿರದಲ್ಲಿ ಎಂಪ್ಯಾನೆಲ್ಮೆಂಟ್ಗೊಂಡ ಆಸ್ಪತ್ರೆಗಳ ವೈದ್ಯರಿಂದ ತಪಾಸಣೆ ನಡೆಸಿ ಕಂಡುಬರುವ ಕಾಯಿಲೆಗಳಿಗೆ ಚಿಕಿತ್ಸೆ, ಸಲಹೆ ನೀಡಿ ಅವರಲ್ಲಿರುವ 30 ಸಾವಿರ ಮೊತ್ತದ ಚಿಕಿತ್ಸೆ ಉಚಿತವಾಗಿ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಹಾಗೂ ಅದರ ಸುತ್ತಮುತ್ತಲಿನ ಗ್ರಾಮದಲ್ಲಿನ ಆರ್ಎಸ್ಬಿವೈ ಕಾರ್ಡ್ ಹೊಂದಿದ ಫಲಾನುಭವಿಗಳು ಈ ಆರೋಗ್ಯ ಶಿಬಿರದಲ್ಲಿ ತಪ್ಪದೆ ಆಗಮಿಸಿ ಉಚಿತವಾಗಿ ನಡೆಸುವ ಶಿಬಿರದ ಸೌಲಭ್ಯವನ್ನು ಪಡೆಯುವಂತೆ ಸಹಾಯಕ ಕಾರ್ಮಿಕ ಆಯುಕ್ತರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9379809486, 9379441045ನ್ನು ಸಂಪರ್ಕಿಸಿ.