ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ತಾಪಂ ಚುನಾವಣೆ

Rashmi Kasaragodu
Updated On : 22 Aug 2013, 11:20 am

ಸುರಪುರ: ಕಳೆದ ತಿಂಗಳು ರಾಜಿನಾಮೆಯಿಂದ ತೆರವಾಗಿರುವ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ಜರುಗಲಿದೆ. ಬೆಳಗ್ಗೆ 10 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾದಗಿರಿ ಸಹಾಯಕ ಆಯುಕ್ತ ಬಿ.ಪಿ. ವಿಜಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಚುನಾವಣೆ ಮೂಲಗಳು ತಿಳಿಸಿವೆ.  ತಾಪಂ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 2ನೇ ಅವಧಿಯ ಹತ್ತು ತಿಂಗಳು ದೇವರಗೋನಾಲ ಕ್ಷೇತ್ರದ ಸಾಬಮ್ಮ ದೇಸಾಯಿ ಅಧ್ಯಕ್ಷರಾಗಿದ್ದರು. ತಾಪಂನ ಒಟ್ಟು 30 ಕ್ಷೇತ್ರಗಳಲ್ಲಿ ಕಾಂಗ್ರೆಸ್ನ 18 ಮತ್ತು ಬಿಜೆಪಿ 12 ಸದಸ್ಯರಿದ್ದಾರೆ. ಕೆಂಭಾವಿ ತಾಪಂ ಕ್ಷೇತ್ರದ ಅನ್ನಪೂರ್ಣ ಮಾಲಿ ಉಪಾಧ್ಯಕ್ಷರಾಗಿದ್ದು, ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement