ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ದಿ. ಅರಸು ಜನ್ಮದಿನಾಚರಣೆ

Rashmi Kasaragodu
Updated On : 22 Aug 2013, 11:20 am

ಸುರಪುರ: ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಮುಂದೆ ಬರಬೇಕೆಂಬ ಮಹಾದಾಸೆಯನ್ನು ಹೊಂದಿದ್ದ ಮಾಜಿ ಸಿಎಂ ದಿ. ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ ಎಂದು ವಿಕಲಚೇತನ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಬಸವರಾಜ ಪೂಜಾರಿ ಹೇಳಿದರು.
  ಸಮೀಪದ ತಿಮ್ಮಾಪುರದ ಯರಸಂ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ದೇವರಾಜ ಅರಸರ 98ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಯರಸಂ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಅಲ್ಬನೂರು, ನಿಂಗಪ್ಪ ರತ್ತಾಳ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಶಿವಪ್ಪ ಪೂಜಾರಿ, ಬಸವರಾಜ ಆಲ್ದಾಳ ಇದ್ದರು. ಹೊನ್ನಪ್ಪ ವಗ್ಗ ಸ್ವಾಗತಿಸಿದರು. ರವಿಕುಮಾರ ವಡ್ಡರ ನಿರೂಪಿಸಿದರು. ಲಿಂಗಣ್ಣ ಕುಂಬಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement