ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಖಿ ಸದ್ಭಾವನೆ ಹೆಚ್ಚಳಕ್ಕೆ ಸಹಕಾರಿ: ಡಿಸಿ ಜಮಾದಾರ್

Rashmi Kasaragodu
Updated On : 22 Aug 2013, 11:20 am

ಯಾದಗಿರಿ: ವಿಶ್ವ ಮಾನವೀಯತೆಯನ್ನು ಸಾರುವ ರಾಖಿಯ ಪವಿತ್ರ ಉತ್ಸವವು ಪ್ರೀತಿ ಹಾಗೂ ಪವಿತ್ರತೆಯ ದ್ಯೋತಕವಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಹೇಳಿದರು.
  ನಗರದ ಪಂಪ ಮಹಾಕವಿ ಕಲ್ಯಾಣ ಮಂಟಪದಲ್ಲಿ ನಗರಸಭೆ, ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆ, ಸ್ತ್ರೀಶಕ್ತಿ ಮಹಿಳಾ ಸಂಘ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಂಧವ್ಯದ ಪ್ರತೀಕ ಈ ರಕ್ಷಾ ಬಂಧನ. ತಂಗಿ ಅಣ್ಣನಿಗೆ ಕಟ್ಟುವ ರಕ್ಷಾ ಬಂಧನ ಸಹೋದರತೆಯ ಪರಮ ಸಂಕಲ್ಪವನ್ನು ಅನಾವರಣಗೊಳಿಸುತ್ತದೆ. ಹಾಗೆಯೇ ಅಣ್ಣ ತಂಗಿಗೆ ಕಟ್ಟುವ ರಕ್ಷಾ ಬಂಧನವು ರಕ್ಷಣೆಯ ಸಂಕೇತವಾಗಿದೆ. ತಂಗಿ ತನ್ನ ಅಣ್ಣನ ಯಶಸ್ಸು, ಶ್ರೇಯೋಭಿವೃದ್ಧಿ ಬಯಸಿ ಅವನ ಬಾಳಲ್ಲಿ ನೆಮ್ಮದಿಯನ್ನು ಕರುಣಿಸಿ, ರಕ್ಷಿಸು ಎಂದು ರಾಖಿಯನ್ನು ಅಣ್ಣನಿಗೆ ಕಟ್ಟುವ ವಾಡಿಕೆ ಇದೆ ಎಂದು ಹೇಳಿದರು.
ಶುಭ ಹಾರೈಕೆ: ಭಾರತೀಯ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬನೂ ಸತ್ಯವಾದ ಸುಖ, ಶಾಂತಿ, ಸಂತೋಷ ವಾತಾವರಣವನ್ನು ನಿರ್ಮಿಸಲು ಈ ರಕ್ಷಾ ಬಂಧನ ಸಹಕರಿಯಾಗಲಿ ಎಂದು ಶುಭ ಹಾರೈಸಿದರು.
  ನಗರಸಭೆ ಸಿಎಒ ಡಾ. ನಾಗರತ್ನ ಬಿ. ದೇಶಮಾನ್ಯೆ, ಪೊಲೀಸರಿಗೆ ರಾಖಿ ಕಟ್ಟಿ ನಂತರ ಮಾತನಾಡಿದರು. ಹೀಗಾಗಿ ನಗರದ ಸಮಸ್ತ ಮಹಿಳೆಯರ ಪರವಾಗಿ ಸಹೋದರತ್ವ ಪ್ರತೀಕವಾಗಿರುವ ರಕ್ಷಾ ಬಂಧನವನ್ನು ಅವರೊಂದಿಗೆ ಆಚರಿಸಲಾಗುತ್ತಿದೆ ಎಂದರು. ಮಹಿಳೆಯರಿಗೆ ಆಭದ್ರತೆ ಭಯವನ್ನು ಹೋಗಲಾಡಿಸುವ ಮೂಲಕ ನೆಮ್ಮದಿ ನೆಲೆಸುವಂತೆ ಪೊಲೀಸರು ಕಾರ್ಯ ನಿರ್ವಹಿಸಲಿ ಎಂದು ಹೇಳಿದರು. ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮೀ, ಮುಖ್ಯಗುರು ಪರಿಮಳಾ ಜೋಶಿ, ಉಮೇಶ ಮುದ್ನಾಳ, ಸಾಯಬಣ್ಣಾ, ಸುನೀಲ್, ದೇವಿಂದ್ರ, ಲೋಕೇಶ ಕುಲಕರ್ಣಿ, ದಯಾನಂದ, ಮಲ್ಲಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement