ರಾಜ್ಯಮಟ್ಟದ ಕಥಾ ಸ್ಪರ್ಧೆ
ಗುಲ್ಬರ್ಗ: ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಗುಲ್ಬರ್ಗ ವಿಶ್ವವಿದ್ಯಾಲಯವು ಸಣ್ಣ ಕಥೆಗಳನ್ನು ಆಹ್ವಾನಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕಥೆಗಾರರು ತಾವು ಬರೆದ ಕಥೆಯ (ನಾಲ್ಕು) 4 ಪ್ರತಿಗಳನ್ನು ಆ. 31ರೊಳಗಾಗಿ ಪ್ರಸಾರಾಂಗ ಗುಲ್ಬರ್ಗ ವಿಶ್ವವಿದ್ಯಾಲಯ ಗುಲ್ಬರ್ಗ 585106ಕ್ಕೆ ಕಳುಹಿಸಿಕೊಡಬೇಕು.
ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕಥೆಗೆ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕವಾಗಿ 2 ಸಾವಿರ ನಗದು ಮತ್ತು ಒಂದು ಚಿನ್ನದ ಪದಕವನ್ನು ಪ್ರಶಸ್ತಿಯ ರೂಪದಲ್ಲಿ ನೀಡಲಾಗುವುದು.
ಕಥೆಯು ಕನ್ನಡದಲ್ಲಿದ್ದು, ಸ್ವತಂತ್ರವಾಗಿರಬೇಕು. ಅನುವಾದವಾಗಿರಬಾರದು. ಈ ಮೊದಲು ಎಲ್ಲಿಯೂ ಪ್ರಕಟವಾಗಿರಕೂಡದು. ಈ ಪ್ರಕಟಣೆ ಹೊರಟ ದಿನಾಂಕದಂದು ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ 45 ವರ್ಷ ಮೀರಿರಬಾರದು. ಇದಕ್ಕೆ ಸಂಬಂಧಿಸಿದಂತೆ ತಮ್ಮ ಕಥೆಯ ಜೊತೆಗೆ ಜನ್ಮ ದಿನಾಂಕ ಕುರಿತು ಪ್ರಮಾಣ ಪತ್ರದ ಒಂದು ದೃಢೀಕೃತ ನಕಲವನ್ನು ಲಗತ್ತಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸುವರು ಪ್ರತ್ಯೇಕ ಕಾಗದದಲ್ಲಿ ತಮ್ಮ ಕಿರು ಪರಿಚಯ ಹಾಗೂ ನಾನು ಬರೆದು ಕಳಿಸುವ ಕಥೆಯು ಸ್ವತಂತ್ರವಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲ ಎಂದು ದೃಢೀಕರಿಸಬೇಕು. ನಿಯಮಗಳು ಹಾಗೂ ಹೆಚ್ಚಿನ ವಿವರಗಳಿಗೆ ಪ್ರಸಾರಾಂಗದ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.