ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಣ್ಣ ವ್ಯಾಪಾರಿಗಳಿಗೆ ಹೊಸ ಯೋಜನೆ

Rashmi Kasaragodu
Updated On : 22 Aug 2013, 11:21 am

ಗುಲ್ಬರ್ಗ/ಶಹಾಬಾದ್: ನಗರದ ಸಣ್ಣ ವ್ಯಾಪಾರಸ್ಥರು, ಸಣ್ಣ ಕೈಗಾರಿಕೆದಾರರಿಗೆ ಕೆನರಾ ಬ್ಯಾಂಕ್ ಎಂಎಸ್ಸಿ ಪ್ರಗತಿ, ಎಂಎಸ್ಸಿ ಉನ್ನತಿ ಎಂಬ ಎರಡು ಯೋಜನೆಗಳನ್ನು ಆ.15 ರಂದು ಜಾರಿಗೆ ತಂದಿದ್ದು, ವ್ಯಾಪಾರಸ್ಥರು, ಸಣ್ಣ ಕೈಗಾರಿಕೆಯವರು ಇದರ ಲಾಭ ಪಡೆಯಬೇಕೆಂದು ಶಹಾಬಾದ್ ಶಾಖೆ ಪ್ರಬಂಧಕ ಮೋಹನ್ ರಾಠೋಡ ತಿಳಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆ ಇದಾಗಿದ್ದು, ಮನೆ ಸಾಲಕ್ಕೆ ಶೇ.9.95 ಬಡ್ಡಿ, ವಿಶೇಷವಾಗಿ ವೈದ್ಯರಿಗೆ ಸುಲಭ ಸಾಲ ಯೋಜನೆಯಡಿಯಲ್ಲಿ 10 ಕೋಟಿವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶಿಕ್ಷಣ ಸಾಲಕ್ಕೆ ಜೀವವಿಮೆ ಯೋಜನೆ ಜಾರಿಗೆ ತರಲಾಗಿದ್ದು, ಇದರ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.
ಅರ್ಜಿ ಆಹ್ವಾನ
ಗುಲ್ಬರ್ಗ: ಗುಲ್ಬರ್ಗ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿಯಿರುವ ಸೀಟುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ.23 ಕೊನೆ ದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆ.24ರಂದು ಬೆಳಗ್ಗೆ 11 ಗಂಟೆಗೆ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು. ಈ ಪ್ರಕ್ರಿಯೆಯಲ್ಲಿ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೇವಲ ಮೇರಿಟ್ ಆಧಾರದ ಮೇರೆಗೆ ನಡೆಸಲಾಗುವುದು. ಖಾಲಿಸ್ಥಾನಗಳ ಹಾಗೂ ಮಾಹಿತಿ ವಿವರ ಇಂತಿದೆ. ಕೋಪಾ ವೃತ್ತಿಯ 2 ಸ್ಥಾನಗಳು- ಒಂದು ವರ್ಷದ ಅವಧಿ-ಎಸ್ಎಸ್ಎಲ್ಸಿ ಹಾಗೂ ಎಲೆಕ್ಟ್ರಾನಿಕ್ ಮೆಕ್ಯಾನಿಕ್-5 ಸ್ಥಾನಗಳು-2 ವರ್ಷದ ಅವಧಿ-ಎಸ್ಎಸ್ಎಲ್ಸಿ ಪಾಸಾಗಿರಬೇಕು. ಹೆಚ್ಚಿನ ಮಾಹಿತಿಗೆ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಗುಲ್ಬರ್ಗದ ಪ್ರಾಚಾರ್ಯ ಮುರಳೀಧರ ರತ್ನಗಿರಿ (08472-236753) ಅಥವಾ ಎಸ್.ಎಸ್. ಕೋಟಿ ಪ್ರದಸ (9448165959) ಅವರನ್ನು ಸಂಪರ್ಕಿಸಿ.
ಇಂದು ಧರಣಿ
ಗುಲ್ಬರ್ಗ: ಕಳೆದ 7 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಹಾಗೂ ಕೂಡಲೇ ಐಟಿಸಿ ತರಬೇತಿದಾರರಿಗೆ ನೇಮಕಾತಿ ಮಾಡುವಂತೆ ಒತ್ತಾಯಿಸಿ ಆ.22ರಂದು ಗುಲ್ಬರ್ಗ ಜೆಸ್ಕಾಂ ಕಚೇರಿ ಎದುರು ಎಐವೈಎಫ್ ನೇತೃತ್ವದಲ್ಲಿ ಐಟಿಸಿ ತರಬೇತಿದಾರರು ಧರಣಿ ನಡೆಸಲು ನಿರ್ಧರಿಸಿದ್ದಾರೆ. ಗುಲ್ಬರ್ಗ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಮೈಸೂರು ಐಟಿಸಿ ತರಬೇತಿದಾರರು ಪಾಲ್ಗೊಳ್ಳಲಿದ್ದಾರೆ.
ಪ್ರಶಸ್ತಿಗೆ ಸ್ವಾಗತ
ಗುಲ್ಬರ್ಗ: ಕನ್ನಡ ನಾಡಿನ ಸಮಾಜಿಕ ನ್ಯಾಯದ ಹರಿಕಾರ, ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 98ನೇ ಜಯಂತ್ಯುತ್ಸವ ನಿಮಿತ್ತ ರಾಜ್ಯ ಸರ್ಕಾರ ಪ್ರತಿಷ್ಠಿತ ಡಿ. ಅರಸು ರಾಜ್ಯಮಟ್ಟದ ಪ್ರಶಸ್ತಿಯನ್ನು ಸಮಾಜಿಕ ಹೋರಾಟಗಾರ ಕೋಣಂದೂರು ಲಿಂಗಪ್ಪ ಅವರಿಗೆ ನೀಡಿರುವುದನ್ನು ಹಿಂದುಳಿದ ವರ್ಗದ ಮುಖಂಡ ಸುಭಾಷ ಜಿ. ಗೌಳಿ ಸ್ವಾಗತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement