ಸಹೋದರತ್ವ ಮೆರೆದ ವಿದ್ಯಾರ್ಥಿಗಳು
ಸುರಪುರ: ಸಮೀಪದ ರಂಗಂಪೇಟೆಯ ಸುದೀಪ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಶಾಲೆಯ ವಿದ್ಯಾರ್ಥಿಗಳು ರಕ್ಷಾ ಬಂಧನವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಿದರು.
ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವುದರ ಮೂಲಕ ಸಹೋದರತ್ವ ಭಾವನೆಗಳಿಗೆ ಮೆರುಗು ಚೆಲ್ಲಿ ಅಣ್ಣನೆಂಬ ಹಿರಿಮೆಯ ಗರಿ ನಿನ್ನದಾಗಿರಲಿ ಎಂದು ಹಾಡಿ ಹಾರೈಸಿದರು. ಮುಸ್ಲಿಂ ವಿದ್ಯಾರ್ಥಿಗಳಿಗೆರ ಹಿಂದೂ ಬಾಲಕಿಯರು ರಾಖಿ ಕಟ್ಟಿ ಸೌಹಾರ್ದತೆ ಮರೆದರು. ಈ ಸಂದರ್ಭದಲ್ಲಿ ಸುದೀಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾಯಬಣ್ಣ ಪುರ್ಲೆ ಮಾತನಾಡಿ, ಭಾರತದ ಪ್ರತಿಯೊಂದು ಹಬ್ಬ ವೈಜ್ಞಾನಿಕ, ಸಂಸ್ಕೃತಿ ಮೂಲಕ ವಿಶೇಷತೆಯನ್ನು ಹೊಂದಿದೆ ಎಂದು ತಿಳಿಸಿದರು. ರಕ್ಷಾ ಬಂಧನದಲ್ಲಿ ಅಣ್ಣ ತಂಗಿಯ ಪ್ರೀತಿ ಮತ್ತು ವಾತ್ಸಲ್ಯವಿದೆ ಎಂದು ನುಡಿದರು. ಶಿಕ್ಷಕರಾದ ಎಂಕೆ.ಬಾಬು, ಬೀರಪ್ಪ ಗೋನಾಲ, ಶಮಾ, ದೀಪಿಕಾ ಜೂಜಾರೆ, ಶಶಿಕಲಾ, ರಾಜೇಶ್ವರಿ, ಶ್ರುತಿ, ನಂದಿನಿ ಹಟ್ಟಿ, ಶಂಕ್ರೆಮ್ಮ, ರೇಖಾ, ಮಾಳಪ್ಪ ಪುರ್ಲೆ ಇದ್ದರು.