ಇಂದು ನೇತ್ರ ತಪಾಸಣೆ ಶಿಬಿರ
ಗುಲ್ಬರ್ಗ: ನಗರದ ಮಾಣೀಕೇಶ್ವರಢಿ ಕಾಲೋನಿಯ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ಉಚಿತ ತಪಾಸಣೆ ಶಿಬಿರ ಆ.23ರಂದು ಬೆಳಗಿನ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಆಯೋಜಿಸಲಾಗಿದೆ. ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು(ಅಂಧತ್ವ ವಿಭಾಗ) ಮತ್ತು ಜಿಲ್ಲಾ ಎಜ್ಯುಕೇಶನ್ ಹಾಗೂ ಚಾರಿಟಬಲ್ ಟ್ರಸ್ಟ್ ಗುಲ್ಬರ್ಗ ಇವರ ಸಹಯೋಗದೊಂದಿಗೆ ಈ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಖ್ಯಾತ ನೇತ್ರ ತಜ್ಞ ಡಾ. ಉದಯ ಪಾಟೀಲ್ ಅವರು ಆರೋಗ್ಯ ತಪಾಸಣೆ ಕೈಗೊಳ್ಳುವರು. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಡಾ. ಎಂ.ಎಸ್. ವರ್ಮಾ ಅವರು ಕೋರಿದ್ದಾರೆ.