ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಿಗದಿಪಡಿಸಿದ ವೇತನಕ್ಕೆ ಆಗ್ರಹಿಸಿ ಡಿಸಿಗೆ ಮನವಿ

Lingaraj Badiger
Updated On : 23 Aug 2013, 11:17 am

ಯಾದಗಿರಿ: ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ದರ್ಜೆಯ ಹೊರ ಗುತ್ತಿಗೆ ನೌಕರರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಿಗದಿಪಡಿಸಿದ ವೇತನವನ್ನು ನೀಡಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ 10 ಮೊರಾರ್ಜಿ ದೇಸಾಯಿ ವಸತಿ ಶಾಲೆ, 3 ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಿದ್ದು, ಅವುಗಳಲ್ಲಿ 153 ಸಿಬ್ಬಂದಿ ಹೊರ ಗುತ್ತಿಗೆ ಆಧಾರದ ಮೇಲೆ ಸುಮಾರು 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಸಿಕ ವೇತನ ಅಡಿಗೆಯವರಿಗೆ 4141 ರು., ಅಡುಗೆ ಸಹಾಯಕರು, ಕಾವಲುಗಾರರು ಮತ್ತು ಸ್ವಚ್ಚತಾ ಸಿಬ್ಬಂದಿಗೆ 3977 ರು. ನೀಡಬೇಕು. ಆದರೆ  ಜಿಲ್ಲೆಯ ಹೊರ ಸಂಪನ್ಮೂಲ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಕಾರ್ಯಾಲಯದಿಂದ ಮಾಸಿಕ 3120 ರು. ಕೊಡಲಾಗುತ್ತಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಿಗದಿ ಪಡಿಸಿದ ವೇತನ ಕೊಡದೇ ಡಿ ದರ್ಜೆ ನೌಕರರಿಗೆ ವಂಚನೆ ಮಾಡಲಾಗುತ್ತಿದೆ. ಕಳೆದ ಫೆ.27ರಂದು ಸಂಸ್ಥೆಯು ಆದೇಶ ಹೊರಡಿಸಿದರೂ ಕೂಡ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಬಡ ನೌಕರರಿಗೆ ವೇತನದಲ್ಲಿ ಕಡಿತ ಮಾಡುತ್ತಿರುವುದರಿಂದ ನೌಕರರ ಜೀವನ ನಡೆಸಲು ತುಂಬಾ ತೊಂದರೆಯಾಗುತ್ತಿದೆ ಎಂದು ದೂರಿದರು.
ಪ್ರತಿ ತಿಂಗಳು ಸರಿಯಾಗಿ ವೇತನ ನೀಡದೆ 3 ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ನೌಕರರಿಗೆ ತುಂಬಾ ತೊಂದರೆಯಾಗುತ್ತಿದೆ. ಹೆಚ್ಚಾಗಿ ಬಡ ಕುಟುಂಬದ ಕಾರ್ಮಿಕರೆ ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಸಂಬಧಪಟ್ಟ ಅಧಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ವಸತಿ ಶಿಕ್ಷಣ ಸಂಸ್ಥೆ ನಿಗದಿಪಡಿಸಿದ ವೇತನವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಸವಕುಮಾರ ಹೊಸಮಠ, ಕಾಶಿಬಾಯಿ ಕುಂಬಾರ್, ಹಣಮವ್ವ ಇಚಿಡಿ, ಭೀಮವ್ವ ದೊರನಳ್ಳಿ, ಶರಣವ್ವ, ರೇಣುಕಾ, ಭೀಮಬಾಯಿ, ಬಸಮ್ಮ, ಮುಕತುಂಬಿ, ಲಕ್ಷ್ಮೀಬಾಯಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement