ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

27,28 ರಂದು ಕ್ರಿಕಿಟ್ ಪಂದ್ಯ

Lingaraj Badiger
Updated On : 24 Aug 2013, 11:13 am

ಯಾದಗಿರಿ:  ಪ್ರಾಥಮಿಕ ಹಾಗೂ ಪ್ರೌಢಶಾಲೆಯ 14 ಮತ್ತು 16 ವರ್ಷ ವಯೋವುತಿಯ ಮಕ್ಕಳ ಗುಲ್ಬರ್ಗ ವಿಭಾಗ ಮಟ್ಟದ ಕ್ರಿಕಿಟ್ ಪಂದ್ಯಾವಳಿಯನ್ನು ಆ.27 ಮತ್ತು 28ರಂದು ಜಿಲ್ಲಾ ಕ್ರೀಡಾಂಗಣದಲ್ಲಿ  ಸಂಘಟಿಸಲಾಗಿದೆ. ಗುಲ್ಬರ್ಗ ವಿಭಾಗದಲ್ಲಿ ಬರುವ ಜಿಲ್ಲಾ ತಂಡಗಳ ವ್ಯವಸ್ಥಾಪಕರು ಆ.26 ರಂದು ಸಂಜೆ 5-30 ಗಂಟೆ ಒಳಗಾಗಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಾರ್ಯಾಲಯ ಯಾದಗಿರಿ ಇಲ್ಲಿ ವರದಿ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯ ತಿಳಿಸಿದ್ದಾರೆ.
'ಲೋಕಾ'ದಿಂದ ಅಹವಾಲು ಸ್ವೀಕಾರ
ಯಾದಗಿರಿ:  ಯಾದಗಿರಿ ಲೋಕಾಯುಕ್ತ ಘಟಕದ ಅಧಿಕಾರಿಗಳು ಆ.29 ರಿಂದ 31ರವರೆಗೆ ಜಿಲ್ಲೆಯ ವಿವಿಧೆಡೆ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕಾರ ಮಾಡಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಸ್ಥಳದಲ್ಲಿಯೇ ಅರ್ಜಿಗಳನ್ನು ಸಲ್ಲಿಸಬಹುದು. ಆ.29 ರಂದು ಸೈದಾಪುರದಲ್ಲಿ ಲೋಕಾಯುಕ್ತ ಡಿಎಸ್ಪಿ ಆರ್.ಎಚ್. ನಾಯಕ, ಬಿ.ಬಿ.ಪಟೇಲ ಅರ್ಜಿ ಸ್ವೀಕರಿಸುವರು. ಆ.30 ರಂದು ಸುರಪುರದ ಪ್ರವಾಸಿ ಮಂದಿರದಲ್ಲಿ ಆರ್.ಎಚ್. ನಾಯಕ, ಬಿ.ಬಿ. ಪಟೇಲ್ ಅರ್ಜಿ ಸ್ವೀಕರಿಸುವರು. ಆ.31 ರಂದು ಶಹಾಪುರದಲ್ಲಿ ಲೋಕಾಯುಕ್ತ ಡಿಎಸ್ಪಿ ಆರ್.ಎಚ್. ನಾಯಕ, ಪಿಐ ಜಗದೀಶ ಹಂಚನಾಳ ಅರ್ಜಿ ಸ್ವೀಕರಿಸುವರು. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಲು ಲೋಕಾಯುಕ್ತ ಉಪಾಧೀಕ್ಷಕ ಆರ್.ಎಚ್.ನಾಯಕ ತಿಳಿಸಿದ್ದಾರೆ.
28ರಂದು ಜಿಪಂ ಅಧ್ಯಕ್ಷರ ಚುನಾವಣೆ
ಯಾದಗಿರಿ:  ಇಲ್ಲಿಯ ಜಿಲ್ಲಾ ಪಂಚಾಯಿತಿಯ 2ನೇ ಅವಧಿಯ ಉಳಿದ 10ತಿಂಗಳ ಕಾಲಾವಧಿಗಾಗಿ ರಾಜಿನಾಮೆಯಿಂದ ತೆರವಾಗಿರುವ ಅಧ್ಯಕ್ಷರ ಹುದ್ದೆಗೆ ಚುನಾಯಿಸುವ ವಿಶೇಷ ಸಭೆಯನ್ನು ಆ.28 ರಂದು ಮಧ್ಯಾಹ್ನ 3 ಗಂಟೆಗೆ ಜಿಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಒ ಅಧಿಕಾರಿ ಎಸ್.ಎ.ಜಿಲಾನಿ ತಿಳಿಸಿದ್ದಾರೆ.
'ಶಿವಶರಣರ ಆದರ್ಶ ಪಾಲಿಸಿ'
ಯಾದಗಿರಿ: ಮಾನವ ಜೀವನ ನಿಸ್ವಾರ್ಥವಾಗಿರಬೇಕು. ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವುದರ ಜತೆಗೆ ಮಾನವ ಕುಲಕೋಟಿಯ ಉದ್ದಾರಕ್ಕಾಗಿ ಶ್ರಮಿಸಿದ ಶಂಕರಾರ್ಯರ್ಯ, ಬಸವಣ್ಣ, ಬುದ್ಧ, ಮಹಾವೀರರಂತಹ ಮಹಾನ್ ಪುರಷರು, ಶಿವಶರಣರು ಮತ್ತು ಮಹಾತ್ಮ ಗಾಂಧಿಜಿಯವರಂತಹ ಮಹಾನ ವ್ಯಕ್ತಿಗಳ ಆದರ್ಶವನ್ನು ಪಾಲಿಸಬೇಕೆಂದು ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಹೇಳಿದರು. ನಗರದ ಹೊರವಲಯದಲ್ಲಿರುವ ದಾಸಬಾಳ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಸಂಕಲ್ಪ ಕಾಯಕ ಎಂಬ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು. ಆಗ ಮಾತ್ರ ಮಾನವ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು. ಪೂಜೆ, ಪ್ರವಚನ, ಅನ್ನ ಸಂತರ್ಪಣೆ ನಡೆಯಿತು. ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement