ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

8500 ನವ ಸಾಕ್ಷರರ ಗುರಿ: ಶ್ರೀಶೈಲ್

Lingaraj Badiger
Updated On : 24 Aug 2013, 11:08 am

ಆಳಂದ: ತಾಲೂಕಿನ 39 ಗ್ರಾಮ ಪಂಚಾಯ್ತಿ ಲೋಕಶಿಕ್ಷಣ ಸಮಿತಿಯ ವಾಪ್ತಿಯಲ್ಲಿ ಆ.25 ರಂದು ನಡೆಯುವ ನವ ಸಾಕ್ಷರರ ಮೌಲ್ಯಮಾಪನದಲ್ಲಿ 8500 ನವ ಸಾಕ್ಷರರ ಗುರಿ ಹೊಂದಲಾಗಿದೆ ಎಂದು ತಾಲೂಕು ಸಂಯೋಜಕ ಶ್ರೀಶೈಲ್ ಕಂಬಾರ ತಿಳಿಸಿದರು.
ಸ್ಥಳೀಯ ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಮೂಲಸಾಕ್ಷರತೆಯ ಮೌಲ್ಯಮಾಪನದ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ನಡೆದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದ 17 ಜಿಲ್ಲೆಗಳ 104 ತಾಲೂಕುಗಳ 3358 ಗ್ರಾಪಂ ಲೋಕಶಿಕ್ಷಣ ಕೇಂದ್ರಗಳ ವ್ಯಾಪ್ತಿಯಲ್ಲಿ ಆ.25 ರಂದು 5.80 ಲಕ್ಷ ನವ ಸಾಕ್ಷರರು ಮೌಲ್ಯಮಾಪನಕ್ಕೆ ಒಳಪಡುತ್ತಾರೆ. ಅದರಂತೆ ನಮ್ಮ ತಾಲೂಕಿನ 39 ಗ್ರಾಪಂ ಲೋಕ ಶಿಕ್ಷಣಗಳ ವ್ಯಾಪ್ತಿಯಲ್ಲಿ 8500 ನವಸಾಕ್ಷರರ ಗುರಿ ಹೊಂದಲಾಗಿದೆ. ಪ್ರೇರಕರು ನೇರವಾಗಿ ಮತ್ತು ಸ್ವಯಂ ಸೇವಕರ ಮೂಲಕ ಕಲಿಕಾರ್ಥಿಗಳನ್ನು ಪರೀಕ್ಷೆಗೆ ನೊಂದಾಯಿಸಿಕೊಳ್ಳುವಂತೆ ಮನಮೊಲಿಸಬೇಕೆಂದು ತಿಳಿಸಿದರು.
ಖರ್ಚು, ವೆಚ್ಚಗಳ ಬಗ್ಗೆ: ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶಾಂತಪ್ಪ ಬಿರಾದಾರ ಮಾತನಾಡಿ, ಪರೀಕ್ಷೆ ನಡೆಸುವ ವಿಧಾನವನ್ನು ವಿವರಿಸಿದ ಅವರು ಪರೀಕ್ಷೆಯ ಖರ್ಚು, ವೆಚ್ಚಗಳ ಬಗ್ಗೆ ತಿಳಿಸಿ ಶಾಲೆಯ ಮುಖ್ಯಗುರುಗಳು, ಸಹಶಿಕ್ಷಕರು ಹಾಗೂ ಪ್ರೇರಕರ ಕರ್ತವ್ಯಗಳ ಕುರಿತು ವಿವರಿಸಿದರು.
ಜಿಲ್ಲಾ ಸಂಯೋಜಕಿ ಭಾರತಿ ಮಾತನಾಡಿ, ಲೆಕ್ಕ ಪತ್ರಗಳಲ್ಲಿ ಸ್ವಲ್ಪ ಅಡೆತಡೆಗಳಾಗಿದ್ದು, ಪ್ರೇರಕರ ಸಂಬಳ ಬಿಡುಗಡೆಗೆ ವಿಳಂಬವಾಗಿದೆ. ಶೀಘ್ರದಲ್ಲಿಯೇ ಸಂಬಳ ಬಿಡುಗಡೆಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಅರ್ಚನಾ ಮಾಡ್ಯಾಳಕರ್ ವ್ಯವಸ್ಥೆ ಮಾಡಿದ್ದಾರೆಂದು ತಿಳಿಸಿದರು.
ತಾಲೂಕು ಪ್ರೇರಕರ ಒಕ್ಕೂಟದ ಅಧ್ಯಕ್ಷ ಶಿವಲಿಂಗ ತೇಲ್ಕರ್, ಗುಂಡಪ್ಪ ರಾಮನ, ಚಂದ್ರಕಾಂತ ನರೋಣೆ, ಜಯಕಾಂತ ವಾಗ್ಮೋರೆ, ರವಿ ಬಿಲಗುಂದಿ, ಅಂಬಾದಾಸ ಪಡಸಾವಳಗಿ, ಸರಸ್ವತಿ ಪಾಟೀಲ್, ಭಾರತಿ ಪಾಟೀಲ್, ಜಗದೇವಿ ವಾಡಿ ಸೇರಿದಂತೆ ಎಲ್ಲ ಗ್ರಾಪಂಗಳ ಪ್ರೇರಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ಮತ್ತು ಸಹ ಶಿಕ್ಷಕರು ಭಾಗವಹಿಸಿದ್ದರು.
--
ವಿದ್ಯುತ್ ತಂತಿಗಳನ್ನು ಸರಿಪಡಿಸಲು ಆಗ್ರಹ
ಗುಲ್ಬರ್ಗ: ಮಹಾನಗರ ಪಾಲಿಕೆ ವಾರ್ಡ್ ನಂ. 40ರ ಬೋರಾಬಾಯಿ ನಗರದ ಭವಾನಿ ದೇವಸ್ಥಾನದ ಹತ್ತಿರ ವಿದ್ಯುತ್ ತಂತಿಗಳು ಗಿಡಗಳಲ್ಲಿ ಆವರಿಸಿಕೊಂಡಿದ್ದು, ಕೂಡಲೇ ತಂತಿಗಳನ್ನು ಸರಿಪಡಿಸಬೇಕು ಎಂದು ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರಮೇಶ ಸರಡಗಿ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಮಳೆ ಬರುವುದರಿಂದ ಗಿಡ-ಮರ ದಟ್ಟ ದಟ್ಟವಾಗಿ ಬೆಳೆದು ದಾರಿ ದೀಪಗಳ ತಂತಿಗಳ ಮಧ್ಯದಲ್ಲಿ ಗಿಡ ಟೊಂಗೆಗಳು ಸೇರಿಕೊಂಡಿರುವುದರಿಂದ ಗಾಳಿ ಬಿಟ್ಟಾಗ ವಿದ್ಯುತ್ ಸಂಚರಿಸಿ ಇಲ್ಲವೇ ತಂತಿ ಕಡಿದು ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗುವ ಸಾಧ್ಯತೆಗಳಿದ್ದು, ಕೂಡಲೇ ಜೆಸ್ಕಾಂ ಈ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement