ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಚುಟುಕು ಸಾಹಿತ್ಯ ಸಮ್ಮೇಳನ

Lingaraj Badiger
Updated On : 24 Aug 2013, 11:12 am

ಕ.ಪ್ರ.ವಾರ್ತೆ  ಯಾದಗಿರಿ  ಆ.23
ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನವನ್ನು 24ರಂದು ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 8.15ಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ರಾಜಾ ಮದನಗೋಪಾಲ ನಾಯಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಚುಸಾಪ ಜಿಲ್ಲಾಧ್ಯಕ್ಷ ಬಸವರಾಜ ಸಿನ್ನೂರ ಪರಿಷತ್ ಧ್ವಜಾರೋಹಣ ಮಾಡುವರು. ಬೆಳಗ್ಗೆ 8.40ಕ್ಕೆ ನಗರದ ಸುಭಾಷ ವೃತ್ತದಿಂದ ವಿದ್ಯಾಮಂಗಲ ಕಾರ್ಯಾಲಯವರೆಗೆ ಸಮ್ಮೇಳನಾಧ್ಯಕ್ಷ ಸಿದ್ದರಾಮ ಹೊನಕಲ್ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಜಿಪಂ ಅಧ್ಯಕ್ಷ ಶರಣಿಕಕುಮಾರ ದೋಖಾ, ಮೆರವಣಿಗೆ ಉದ್ಘಾಟಿಸಲಿದ್ದಾರೆ. ವಿವಿಧ ಕಲಾ ತಂಡಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.
ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶಾಸಕ ಡಾ. ಎ.ಬಿ. ಮಾಲಕರೆಡ್ಡಿ, ಕೇಂದ್ರ ಚುಸಾಪ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಪುಸ್ತಕ ಬಿಡುಗಡೆ ಮಾಡುವರು. ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಸಿದ್ದರಾಮ ಹೊನಕಲ್ ಅವರು ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ಬಳ್ಳಾರಿ ಕೃಷ್ಣ ದೇವರಾಯ ವಿವಿ ಕುಲಸಚಿವ ಡಾ.ರಂಗರಾಜ ನುಡಿಗಳ್ಳನ್ನಾಡಲಿದ್ದಾರೆ.
ಅತಿಥಿಗಳಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಗುರುಪಾಟೀಲ ಶಿರವಾಳ, ಪ್ರಮುಖರಾದ ವೆಂಕಟರೆಡ್ಡಿ ಮುದ್ನಾಳ, ಸುರೇಶ ಸಜ್ಜನ್, ಪ್ರಭುಲಿಂಗ ನೀಲೂರೆ, ವಿಜಯಕುಮಾರ ತೇಗಲತಿಪ್ಪಿ ಭಾಗವಹಿಸಲಿದ್ದಾರೆ. ಶಿವಮೂರ್ತಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು, ನಾಲವಾರದ ತೋಟೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ನಡೆಯುವ ಪ್ರಥಮ ಗೋಷ್ಟಿಯಲ್ಲಿ “^ÚßlßOÚßVÚ×Úß ನಡೆದು ಬಂದ ¥ÛÂ’ ಕುರಿತು ಶಿರಸಿಯ ವಿಡಂಬಾರಿ ಹಾಗೂ “ÔæçOÚßVÚ×Úß ನಡೆದು ಬಂದ ¥ÛÂ’ ಕುರಿತು ಪ್ರಭಾಕರ ಜೋಶಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ 2ನೇ ಗೋಷ್ಟಿ ನಡೆಯಲಿದ್ದು, ಚುಟುಕು ಸಾಹಿತ್ಯದಲ್ಲಿ ಹಾಸ್ಯ ವಿಷಯವಾಗಿ ಎ.ಎನ್.ರಮೇಶ ಗುಬ್ಬಿ ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಟಿಯನ್ನು ಗುಲ್ಬರ್ಗ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಉದ್ಘಾಟಿಸಲಿದ್ದಾರೆ.
  ಮಧ್ಯಾಹ್ನ 3ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಸಂಜೆ 4ಕ್ಕೆ ಕವಿಗೋಷ್ಟಿ ಜರುಗಲಿದೆ. ನಂತರ
ಹಾಸ್ಯಗೋಷ್ಟಿ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಸಿನ್ನೂರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement