ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹಾಸ್ಟೆಲ್ ಅವ್ಯವಸ್ಥೆ: ಜಿಪಂ ಸದಸ್ಯ ತರಾಟೆ

Lingaraj Badiger
Updated On : 24 Aug 2013, 11:08 am

ಕ.ಪ್ರ.ವಾರ್ತೆ, ಅಫಜಲ್ಪುರ, ಆ.23
ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಕಾಲೇಜು ಬಾಲಕಿಯರ ವೃತ್ತಿಪರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಪಂ ಸದಸ್ಯ ಸಿದ್ದಾರ್ಥ ಬಸರಿಗಿಡ ಪರಿಶೀಲಿಸಿದರು.
ವಿದ್ಯಾರ್ಥಿನಿಯರಿಗೆ ಊಟ ವ್ಯವಸ್ಥೆ ಸರಿಯಾಗಿಲ್ಲದಿರುವುದು, ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗಾಗಿರುವ ಕೋಣೆಗಳ ಕಿಟಕಿ, ಬಾಗಿಲು ಸರಿಯಾಗಿಲ್ಲದಿರುವುದು ಸೇರಿದಂತೆ ಮೂಲಸೌಲಭ್ಯಗಳ ಕೊರತೆಯನ್ನು ಮನಗಂಡ ಅವರು ಮೇಲ್ವಿಚಾರಕಿ ನಾಗಿಣಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಎಲ್.ಬಿ. ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲಿಯ ಮಕ್ಕಳು ವಸತಿ ನಿಲಯದ ಅವ್ಯವಸ್ಥೆಗಳ ಬಗ್ಗೆ ಜಿಪಂ ಸದಸ್ಯರಿಗೆ ದೂರು ನೀಡಿದರು. ವಸತಿ ನಿಲಯದ ಮೇಲ್ವಿಚಾರಕಿ ಕರ್ತವ್ಯ ಮೇಲೆ ಇಲ್ಲದಿರುವುದರಿಂದ ಅವರ ಬೇಜವಾಬ್ದಾರಿಯನ್ನು ಕಂಡು ಬಸರಿಗಿಡ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದೆ ವಸತಿ ನಿಲಯದಲ್ಲಿ ಯಾವುದೇ ತರಹದ ಕುಂದುಕೊರತೆಯುಂಟಾದರೆ ವಿದ್ಯಾರ್ಥಿನಿಯರು ಕೂಡಲೇ ತಮ್ಮನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಜಿಪಂ ಸದಸ್ಯ ಸಿದ್ದಾರ್ಥ ಬಸರಿಗಿಡ ತಿಳಿಸಿದರು.
ನಂತರ ವಿಷಯ ತಿಳಿದ ವಸತಿ ನಿಲಯದ ಮೇಲ್ವಿಚಾರಕಿ ಹಾಗೂ ಇಲಾಖೆಯ ವ್ಯವಸ್ಥಾಪಕ ವಸತಿ ನಿಲಯಕ್ಕೆ ಬಂದು ಅಲ್ಲಿಯ ವ್ಯವಸ್ಥೆಯ ಬಗ್ಗೆ ಜಿಪಂ ಸದಸ್ಯರಿಗೆ ಮಾಹಿತಿ ನೀಡಿದರು. ಅದಕ್ಕೆ ಸಮಾಧಾನಗೊಳ್ಳದ ಜಿಪಂ ಸದಸ್ಯ ಬಸರಿಗಿಡ ಅವರು ಸಿಇಒ ಅಧಿಕಾರಿ ಪಲ್ಲವಿ ಆಕುರಾತಿ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ನಿಲಯದ ಅವ್ಯವಸ್ಥೆಯ ಬಗ್ಗೆ ದೂರು ನೀಡಿದರು.
ವಸತಿ ನಿಯಲದ ಸಮಸ್ಯೆಗಳ ಬಗ್ಗೆ ಸ್ಪಂದಿಸಿದ ಅವರು ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿ ಅಲ್ಲಿಯ ಸಮಸ್ಯೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement