ಜವಳಿ ಸಚಿವರ ಪ್ರವಾಸ
ಗುಲ್ಬರ್ಗ: ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ ಚಿಂಚನಸೂರ ಆ.24 ರಂದು ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಆ.25ರಂದು ಗುಲ್ಬರ್ಗದಲ್ಲಿ ವಾಸ್ತವ್ಯ ಮಾಡುವರು. ಆ.26 ರಂದು ಮಧ್ಯಾಹ್ನ 1ಕ್ಕೆ ಯಾದಗಿರಿಯ ಯಲಸತ್ತಿ ಗ್ರಾಮಕ್ಕೆ ಪ್ರಯಾಣಿಸಿ ಯಲಸತ್ತಿ ಗ್ರಾಮದಲ್ಲಿ ನಿಗದಿಪಡಿಸಿರುವ ಬ್ಯಾರೇಜ್ ಬ್ರಿಡ್ಜ್ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ 7ಕ್ಕೆ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ಆ.27ರಂದು ಮ.1ಕ್ಕೆ ಯಾದಗಿರಿ ತಾಲೂಕಿನ ಗುಂಜನೂರಿಗೆ ಪ್ರಯಾಣಿಸಿ ಗುರುಮಿಠಕಲ್ ಹತ್ತಿರದ ಗುಂಜನೂರಿನಲ್ಲಿ ಸಾರ್ವಜನಿಕರಿಗೆ ಕುಡಿಯುವ ಶುದ್ಧ ನೀರನ್ನು ಸರಬರಾಜು ಮಾಡಲು ಕುಡಿವ ನೀರಿನ ಅರ್ಸೇನಿಕ್ ಅಂಶ ಶುದ್ಧೀಕರಣ ಘಟಕವನ್ನು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಗುಂಜನೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಯ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಸಂಜೆ 7ಕ್ಕೆ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
28ರಂದು ಮ.2ಕ್ಕೆ ಯಾದಗಿರಿಗೆ ಪ್ರಯಾಣಿಸಿ ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕಾಮಗಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವರು, ಪರಿವೀಕ್ಷಣೆ ಮಾಡುವರು. ರಾತ್ರಿ 9ಕ್ಕೆ ಯಾದಗಿರಿಯಿಂದ ಬೆಂಗಳೂರಿಗೆ ಸೋಲಾಪುರ- ಯಶವಂತಪುರ ರೈಲು ಮುಖಾಂತರ ಬೆಂಗಳೂರಿಗೆ ಪ್ರಯಾಣಿಸುವರು.