ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂತ ಬಾಪೂರ ಮೇಲಿನ ಆರೋಪಕ್ಕೆ ಆಕ್ರೋಶ

Mainashree
Updated On : 25 Aug 2013, 11:17 am

ಯಾದಗಿರಿ: ಪ್ರಸಿದ್ಧ ಸಂತ ಅಸಾರಾಮಜೀ ಬಾಪೂರವರ ಮೇಲೆ ಕಳೆದ 5 ವರ್ಷಗಳಿಂದ ಕೆಲವು ವ್ಯಕ್ತಿಗಳು ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ. ಈ ವಿಷಯವನ್ನು ಸುದ್ದಿ ವಾಹಿನಿಗಳು ನಿತ್ಯ ಪ್ರಸಾರ ಮಾಡುತ್ತಿವೆ. ತನಿಖೆ ಮುಗಿಯುವರೆಗೆ ಈ ಪ್ರಸಾರಕ್ಕೆ ಕಡಿವಾಣ ಹಾಕಬೇಕೆಂದು ಎಂದು ಆಗ್ರಹಿಸಿ ಸಂತ ಅಸಾರಾಮಜೀ ಯೋಗ ವೇದಾಂತ ಸಮಿತಿ ಶಹಾಪುರ ಘಟಕದ ಪದಾಧಿಕಾರಿಗಳು ಶನಿವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಬಾಪೂಜಿಯವರು ದೇಶ ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿದ್ದಾರೆ. ಅವರ ಏಳಿಗೆ ಸಹಿಸದ ವಿದೇಶಿ ಶಕ್ತಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಇದರಿಂದ ವಿಶ್ವ ಪ್ರಸಿದ್ಧ ಸಂತರ ಗರಿಮೆಗೆ ಹಾನಿಯಾಗುತ್ತಿದೆ.
 ಆಶ್ರಮವು ನೀಡುತ್ತಿರುವ ವಿಭಿನ್ನ ಸೇವೆಗಳಿಗೆ ತೊಂದರೆಯಾಗುತ್ತಿದೆ. ಭಾರತದ ಸನಾತನ ಧರ್ಮ ಹಾಗೂ ಸಂಸ್ಕೃತಿಗೆ ದಕ್ಕೆಯಾಗುತ್ತಿದೆ. ಬಾಪೂರವರ ಮೇಲೆ ಬಂದಿರುವ ಆರೋಪ ನಿರಾಧಾರವಾದದ್ದು. ಈ ವಿಷಯದ ಬಗ್ಗೆ ದೃಶ್ಯ ಮಾಧ್ಯಮದವರು ವಾಸ್ತವಿಕತೆ ಶೋಧನೆ ಮಾಡದೇ ಅವರ ವಿರುದ್ದ ನಕರಾತ್ಮಕ ಸುದ್ದಿ ಬಿತ್ತರಿಸುತ್ತಿದ್ದಾರೆ.
 ಇದರಿಂದ ಅವರ ಭಕ್ತರಿಗೆ ನೋವಾಗಿದೆ. ಆದ್ದರಿಂದ ಈ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹಿನಿಗಳಿಗೆ ಸೂಚಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಘಟಕದ ಸಂಚಾಲಕ ಸಿದ್ದಣ್ಣ ದೋತ್ರೆ, ತಿರುಪತಿ ಟೊಣಪೆ ಗೋಗಿ, ಮಂಜು ಸಗರ, ಸುಖರಾಜ, ಅಮರೇಶ, ರಘುನಾಥ, ಸತೀಶ್ ದೋತ್ರೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement