ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದಿನ ಕಾರ್ಯಕ್ರಮಗಳು

Mainashree
Updated On : 26 Aug 2013, 11:22 am

ಮಾನವ ಹಕ್ಕುಗಳ ಆಯೋಗದ ಸದಸ್ಯರ ಪ್ರವಾಸ ಕಾರ್ಯಕ್ರಮ
ಗುಲ್ಬರ್ಗ: ರಾಜ್ಯದ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಆ.27 ರಂದು ಬೆಳಿಗ್ಗೆ ಉದ್ಯಾನ ಎಕ್ಸ್‌ಪ್ರೆಸ್ ರೈಲು ಮೂಲಕ ಗುಲ್ಬರ್ಗಕ್ಕೆ ಆಗಮಿಸುವರು. ಅಂದು ಮಧ್ಯಾಹ್ನ 11.30 ರಿಂದ 1 ಗಂಟೆವರೆಗೆ ಗುಲ್ಬರ್ಗ ಜಿಲ್ಲೆಯ ದೂರುಗಳನ್ನು ಸ್ವೀಕರಿಸುವರು. ಮಧ್ಯಾಹ್ನ 3 ರಿಂದ 4.30 ಗಂಟೆವರೆಗೆ ಗುಲ್ಬರ್ಗ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವರು. ಆ.28 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ರವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಚರ್ಚಿಸುವರು. ಮಧ್ಯಾಹ್ನ 3 ರಿಂದ 4.30 ರವರೆಗೆ ಜಿಲ್ಲಾ ಬಂದೀಖಾನೆಗೆ ಭೇಟಿ ನೀಡುವರು. ಆ.29 ರಂದು ಬೆಳಿಗ್ಗೆ 10.30ಕ್ಕೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವರು. ಮಧ್ಯಾಹ್ನ 4ಕ್ಕೆ ಬೀದರ್ ಜಿಲ್ಲೆಗೆ ಪ್ರಯಾಣಿಸುವರು.
ಇಂದು ಪ್ರತಿಭಟನೆ
ಗುಲ್ಬರ್ಗ/ಶಹಾಬಾದ್: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಆ.26 ರಂದು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ. ಬೆಳಿಗ್ಗೆ 10.30ಕ್ಕೆ ಶ್ರೀನಿವಾಸ ವೃತ್ತದಿಂದ ಪುರಸಭೆ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ವಲಯ ಅಧ್ಯಕ್ಷ ಸಿದ್ದು ಪಂಚಾಳ ತಿಳಿಸಿದ್ದಾರೆ.
ತಾಲೂಕು ಕೆಡಿಪಿ ಸಭೆ
ಗುಲ್ಬರ್ಗ: ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಆ.26 ರಂದು ಬೆಳಿಗ್ಗೆ 11ಕ್ಕೆ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಸಭೆ ಜರುಗಲಿದೆ. ಸಭೆಯಲ್ಲಿ 2012-13ನೇ ಸಾಲಿನಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ 2013-14ನೇ ಸಾಲಿನ ಸಂಪೂರ್ಣ ಕಾಮಗಾರಿಗಳ ಪ್ರಗತಿ ವರದಿ ಚರ್ಚಿಸಲಾಗುವುದು.
ಅಭಿನಂದನೆ
ಗುಲ್ಬರ್ಗ:  ಕಾಂಗ್ರೆಸ್ ಸರ್ಕಾರದ ಸಾಧನೆಗೆ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ವಿಧಾನಸಭಾ ಉಪ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 100 ದಿನ ಕಾಂಗ್ರೆಸ್ ಆಡಳಿತ ಪಕ್ಷದ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಇಡೇರಿಸಿದಕ್ಕೆ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜನತೆ ಪಕ್ಷದ ಅಭ್ಯರ್ಥಿ ಡಿ. ಕೆ. ಸುರೇಶಕುಮಾರ್, ರಮ್ಯ ಅವರನ್ನು ಗೆಲ್ಲಿಸಿದ್ದಾರೆ. ಮತದಾರರಿಗೆ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಚಿನ್ನ ಕಳವು: ದೂರು
ಗುಲ್ಬರ್ಗ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳ ಬ್ಯಾಗಿನಲ್ಲಿದ್ದ 3,60 ಲಕ್ಷ ಮೌಲ್ಯದ 150 ಗ್ರಾಂ ಬಂಗಾರ ಮಂಗಮಾಯವಾಗಿದೆ. ಜೇವರ್ಗಿ ತಾಲೂಕಿನ ಯಾರವಾಳ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿ ವೀಣಾ ಶರಣಗೌಡ ಬಾಚವಾರ ಬಂಗಾರ ಕಳೆದುಕೊಂಡವರು. ಅಣ್ಣನ ಮದುವೆ ನಿಶ್ಚಿತಾರ್ಥ ನಿಮಿತ್ತ ವೀಣಾ ಜೇವರ್ಗಿ ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬಿಜಾಪುರಕ್ಕೆ ತೆರಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement