ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಂದಾಚಾರ ನಿವಾರಿಸುವಲ್ಲಿ ಶರಣರ ಶ್ರಮ ಅಪಾರ

Mainashree
Updated On : 26 Aug 2013, 11:21 am

ಗುಲ್ಬರ್ಗ:  12ನೇ ಶತಮಾನದ ವೈಚಾರಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಅನೇಕ ಶರಣರು ಸಮಾಜದ ಕಂದಾಚಾರವನ್ನು ಕಿತ್ತು ಹಾಕಲು ಯತ್ನಿಸಿದರು. ಲಿಂಗ ತಾರತಮ್ಯ, ಜಾತೀಯತೆ ತೊಡೆದು ಸಮಾಜತತ್ವದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ಅವರು ನೂತನ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಶರಣ ಲಿಂಗಣ್ಣ ಸತ್ಯಂಪೇಟೆ ಸ್ಮರಣಾರ್ಥ ವಿಶ್ವಜ್ಯೋತಿ ಪ್ರತಿಷ್ಠಾನವು ಆಯೋಜಿಸಿದ್ದ ಶ್ರಾವಣಕ್ಕಾಗಿ ಮಾಸದ ಶರಣರು ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿಗಳಾದ ಬಿ.ಜಿ.ಪಾಟೀಲ್, ಚಂದ್ರಶೇಖರ ನಿಂಗಶೆಟ್ಟಿ, ಬಸವಕಲ್ಯಾಣ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ದಶವಂತ ಬಂಡೆ, ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಜಿ.ಜೋಶಿ,  ಮಾತನಾಡಿದರು.
ರಾಜಶೇಖರ ಬಿರಾದಾರ ವಚನ ಗಾಯನ ಹಾಡಿದರು. ಪತ್ರಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಯಾಳಗಿ ಪ್ರಾರ್ಥನೆ ಗೀತೆ ಹಾಡಿದರು. ಸುಮಿತ್ರಾ ಕೆ. ಕಾರ್ಯಕ್ರಮ ನಿರೂಪಿಸಿದರು. ಭಾರತೀಶ ಬೆಳಗುಂದಿ ಸ್ವಾಗತಿಸಿದರು. ಹಣಮಂತ ಖಜೂರಿ ವಂದಿಸಿದರು.
ಪ.ಮಾನು ಸಗರ, ಶ್ರೀಕಾಂತಗೌಡ ತಿಳಗೂಳ, ಶಿವಕುಮಾರ ಸಿ.ಎಚ್.ರಾಜುಗೌಡ ಅವರಳ್ಳಿ, ಮಂಜುಳಾ ಧಣಿ, ಪೂಜಾ ಹಿರೇಮಠ ನಿಡಗುಂದಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement