ರಾಘವೇಂದ್ರಸ್ವಾಮಿಗಳ 342ನೇ ಆರಾಧನೆ: ಪಂಚರಾತ್ರೋತ್ಸವ
ಕ.ಪ್ರ.ವಾರ್ತೆ ಗುಲ್ಬರ್ಗ ಆ.25
ಇಲ್ಲಿನ ಬಿದ್ದಾಪುರದಲ್ಲಿರುವ ಶ್ರೀನಂಜನಗೂಡು ಗುರುರಾಘವೇಂದ್ರರ ಮಠದಲ್ಲಿ 5 ದಿನಗಳಿಂದ ಗುರುರಾಯರ 342ನೇ ಆರಾಧನೆ ನಿಮಿತ್ತ ನಡೆದಿದ್ದ ಪಂಚರಾತ್ರೋತ್ಸವ ಸಂಪನ್ನಗೊಂಡಿತು. ಸಾವಿರಾರು ಭಕ್ತರು 5 ದಿನಗಳ ಸಮಾರಂಭದಲ್ಲಿ ಭಾಗವಹಿಸಿ ರಾಯರನ್ನು ಸ್ಮರಿಸಿದರು.
ಪ್ರತಿನಿತ್ಯ ಬೆಳಗ್ಗೆ ಗುರುರಾಯರ ವೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ವಿಶೇಷ ಅಲಂಕಾರಾದಿಗಳು ನಡೆದವು. ಸಂಗೀತ ಕಲಾವಿದರಾದ ರಂಜನಾ ಕುಲಕರ್ಣಿ, ಸಂತೋಷ ಗದ್ದನಕೇರಿ, ಸ್ನೇಹಾ, ಪ್ರಲ್ಹಾದ ಸಂತೇಕೆಲ್ಲೂರ್, ಸಾವಿತ್ರಿ ಥಿಟೆ, ಜಾಹ್ನವಿ ಕುಲ್ಕರ್ಣಿ, ಲತಾ ಹರಸಂಗಿ, ಸೇರಿದಂತೆ ಅನೇಕರು ಸಂಗೀತ ಸೇವೆ ನಡೆಸಿಕೊಟ್ಟರು.
ಸಂಗೀತ ಸೇವೆ ಸೇರಿದಂತೆ ಪಂಚರಾತ್ರೋತ್ಸವದಲ್ಲಿ ನಡೆದ ಎಲ್ಲಾ ಸಮಾರಂಭಗಳು ಭಕ್ತರ ಮನಸೂರೆಗೊಂಡವು.
ವಸಂತಾಚಾರ್ಯ ಸರಡಗಿ, ಶ್ರೀನಿವಾಸಾಚಾರ್ಯ ಪದಕಿ ಉಪನ್ಯಾಸ ನೀಡಿದರು. ಮಠದ ವಿಚಾರಣಕರ್ತರಾದ ನವಲಿ ಕೃಷ್ಣಾಚಾರ್ಯ, ವ್ಯವಸ್ಥಾಪಕ ಗುರುರಾಜಾಚಾರ್ಯ ಉಸ್ತುವಾರಿಯಲ್ಲಿ ಪಂಚರಾತ್ರೋತ್ಸವ ವೈಭವದಿಂದ ನಡೆಯಿತು. ಭಕ್ತರಿಗೆ ಫಲ- ಮಂತ್ರಾಕ್ಷತೆ ಪ್ರಸಾದ ವಿತರಿಸಲಾಯಿತು.