'ವ್ಯಕ್ತಿತ್ವ ವಿಕಸನಕ್ಕೆ ಸ್ಪರ್ಧೆ ಅವಶ್ಯ'
ಚಿತ್ತಾಪುರ: ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಒಳ್ಳೆ ದಾರಿಯಾಗುತ್ತದೆ ಎಂದು ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಇಲ್ಲಿನ ಕೋರಿ ಸಿದ್ದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ 67ನೇ ಸ್ವಾತಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಫರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾದರು.
ಗಂಗಾ ಪರಮೇಶ್ವರ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಬಿರಾದಾರ, ಪ್ರಾಧ್ಯಾಪಕ ಬಿಕೆ ಪಂಡಿತ, ನಿವೃತ್ತ ಶಿಕ್ಷಕ ಚಂದ್ರಶೇಖರ ದಿಗ್ಗಾಂವಕರ ಮಾತನಾಡಿದರು.
ಉಪನ್ಯಾಸಕ ಎಚ್.ಬಿ. ಪಾಟೀಲ್, ಡಾ. ಹಣಮಂತ ಮೇಲಕೇರಿ, ಸಂಸ್ಥೆಯ ಅಧ್ಯಕ್ಷ ಭಾಗಪ್ಪ ನಾಲವಾರ, ಕಾರ್ಯದರ್ಶಿ ನಾಗರಾಜ ರೆಡ್ಡಿ, ಉಪನ್ಯಾಸಕರಾದ ಮಸ್ತಾನ ಪಟೇಲ್, ಮುನಿಯಮ್ಮ, ತಮ್ಮಣ್ಣ ವನಗೇರಿ, ಶಿವಕುಮಾರ್ ದೊಡ್ಮನಿ, ಶರಣಪ್ಪ ಹಲಕಟ್ಟಿ ಉಪಸ್ಥಿತರಿದ್ದರು. 18 ಫ್ರೌಡಶಾಲೆಗಳು ಹಾಗೂ 13 ಕಾಲೇಜುಗಳ ಮಕ್ಕಳು ಸ್ಪರ್ಧೆಯಲ್ಲಿ ಬಾಗವಹಿಸಿದ್ದರು.
ಪ್ರಾಚಾರ್ಯ ಶಾಂತಕುಮಾರ್ ಸೂಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಚನ್ನಮ್ಮ ಪ್ರಾಥಿಸಿ, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ,ಶ್ರೀಧರ್ ಇನಾಮದಾರ ಸ್ವಾಗತಿಸಿದರು. ಪ್ರಕಾಶ ಮೋಗಲಾ ವಂದಿಸಿದರು.