ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣರ ಕನಸು ನನಸಾಗಲಿ

Mainashree
Updated On : 26 Aug 2013, 11:20 am

ಗುಲ್ಬರ್ಗ/ಶಹಾಬಾದ್:  ವೀರಶೈವ ಸಮಾಜ ಹಲವು ಒಳಪಂಗಡಗಳಾಗಿ ಹರಿದು ಹಂಚಿ ಹೋಗಿದ್ದು, ಇವುಗಳನ್ನು ಒಂದೆಡೆ ಸೇರಿಸುವ ಕೆಲಸ ನಡೆಯುತ್ತಿದೆ. ಒಳಪಂಗಡಗಳನ್ನು ಸರ್ಕಾರದ ಸೌಲಭ್ಯ ಪಡೆಯಲು ಮಾತ್ರ ಸೀಮಿತಗೊಳಿಸಿ, ಬಸವಾದಿ ಶರಣರು ಇಂಥ ಕನಸನ್ನು ಕಂಡಿದ್ದರು. ಅವರ ಕನಸನ್ನು ನನಸಾಗಿಸಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾ ಸಭಾ ಶಹಾಬಾದ್ ಘಟಕದ ಅಧ್ಯಕ್ಷ ಸಂತೋಷಕುಮಾರ್ ಇಂಗಿನಶೆಟ್ಟಿ ಕರೆ ನೀಡಿದರು.
ನಗರದ ಬಸವೇಶ್ವರ ನಗರದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಡಪದ ಸಮಾಜ ಶಿಕ್ಷಣಕ್ಕೆ ಮಹತ್ವ ಕೊಡಬೇಕಾಗಿದೆ. ಆರ್ಥಿಕವಾಗಿ ಬೆಳೆದು, ಸಂಘಟನೆ ಮಾಡಿದಾಗ ಮಾತ್ರ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ, ಸಂಘಟನೆ ಶಕ್ತಿ ಪ್ರದರ್ಶನವಾಗುವವರೆಗೆ ನಮಗೆ ಯಾರು ಸಹಾಯ ಮಾಡುವುದಿಲ್ಲ ಎಂದು ಹೇಳಿದರು.
ನಿವೃತ್ತ ಶಿಕ್ಷ ತಿಪ್ಪಣ್ಣ ಬೆಲ್ಲದ ಮಾತನಾಡಿದರು. ಬಿಜೆಪಿ ಯುವ ಘಟಕ ಅಧ್ಯಕ್ಷ ಗುರುರಾಜ ಇಂಗಿನಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ನಗರಸಭೆ ಸದಸ್ಯ ಸೂರ್ಯಕಾಂತ ಕೋಬಾಳ ದೀಪ ಬೆಳಗಿಸಿದರು.
ರೇವಣಸಿದ್ದಪ್ಪ ಹಡಪದ, ಜಿಲ್ಲಾ ಅಧ್ಯಕ್ಷ ಸೋಮಶೇಖರ ಹಡಪದ, ಅಶೋಕ ಪಾಟೀಲ್ ರದ್ದೇವಾಡಿ, ನಾಗಣ್ಣ ರಾಂಪುರೆ, ಶಹಾಪುರ ತಾಲೂಕು ಅಧ್ಯಕ್ಷ ಭಾಗಣ್ಣ ಹಡಪದ, ಗೌರವ ಅಧ್ಯಕ್ಷ ನಾಗಣ್ಣ ಹಡಪದ ಉಪಸ್ಥಿತರಿದ್ದರು. ನಗರ ಘಟಕ ಅಧ್ಯಕ್ಷ  ಸಿದ್ದು ಕೋರವಾರ ಅಧ್ಯಕ್ಷತೆ ವಹಿಸಿದ್ದರು.
ಚಿತ್ತಾಪುರ ತಾಲೂಕು ಅಧ್ಯಕ್ಷ ಬಸವರಾಜ ಸೂಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಹಡಪದ ಕಿರಣಗಿ ನಿರೂಪಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement