ಶಿವಲಿಂಗೇಶ್ವರ ಪ್ರೌಢಶಾಲೆ ಸಾಧನೆ
ಆಳಂದ: ತಾಲೂಕಿನ ತಡಕಲ್ ಶಿವಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಆಟಗಳಲ್ಲಿ ಭಾಗಿಗಳಾಗಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆಂದು ಮುಖ್ಯಗುರು ಚಂದ್ರಕಾಂತ ಕಲಶೆಟ್ಟಿ, ದೈಹಿಕ ಶಿಕ್ಷಕ ಶರಣಬಸಪ್ಪ ತಿಳಿಸಿದ್ದಾರೆ.
ಬಾಲಕರ ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಬಾಲಕ ಹಾಗೂ ಬಾಲಕಿಯರು ಖೋಖೋ ಆಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ 4್ಢ100 ರೀಲೆ ಓಟದ ಸ್ಪರ್ಧೆಯಲ್ಲಿ ತಾಲೂಕಿಗೆ ಆಯ್ಕೆಯಾಗಿದ್ದಾರೆ. 100 ಮೀ. ಓಟದಲ್ಲಿ ನಂದಿತಾ ಸಾಲೇಗಾಂವ, 200 ಮೀ. ಓಟ, ಉದ್ದ ಜಿಗಿತದಲ್ಲಿ ಪ್ರಥಮ ಗಂಗಾಬಾಯಿ ಬಬಲೇಶ್ವರ, ಸರಸ್ವತಿ ಸಗರ ದ್ವಿತೀಯ, ಬಾಲಕರ 4್ಢ100 ರೀಲೆ ಓಟದ ಸ್ಪರ್ಧೆಯಲ್ಲಿ ಅಮರ, ಗಂಗಾಧರ, ನಬಿಸಾಬ್, ಲೋಕೇಶ, ಸಂಗಮೇಶ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗುಂಡು, ಚಕ್ರ ಎಸೆತ, ಜಾವಲಿನ ಎಸೆತದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮಾಜಿ ಶಾಸಕ ಸುಭಾಷ ಗುತ್ತೇದಾರ, ಅಧ್ಯಕ್ಷ ಎಂ.ಸಿ. ಸ್ವಾಮಿ, ಉಪಾಧ್ಯಕ್ಷ ಶಿವಪುತ್ರಪ್ಪ ಬೆಳ್ಳೆ, ಕಾರ್ಯದರ್ಶಿ ಶ್ರೀಮಂತ ನಾಮಣೆ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಹಾಗೂ ಶಿಕ್ಷಕ ಪಿ.ಪಿ. ಶಿವಶೆಟ್ಟಿ, ಬಿ.ಪಿ. ಜಾಧವ, ಬಿ.ಆರ್. ಜಮಾದಾರ, ವೈಜನಾಥ ಶಿವಶೆಟ್ಟಿ, ಶರಣಬಸಪ್ಪ ಬೆಳ್ಳೆ, ಸುರೇಖಾ ಮಹಾಜನ ಹಾಗೂ ಪಾಲಕರು ಹರ್ಷ ವ್ಯಕ್ತಪಡಿದ್ದಾರೆ.