ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ

Mainashree
Updated On : 28 Aug 2013, 10:58 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಆ.27
ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡ ರೈತರ ಬೆಳೆಗಳಿಗೆ ನೀರೊದಗಿಸಿ, ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್‌ಚಿಂಚನಸೂರ್ ಹೇಳಿದರು.
ತಾಲೂಕಿನ ಯಲಸತ್ತಿ ಗ್ರಾಮದ ಹತ್ತಿರ ನಂದೇಪಲ್ಲಿ ನಾಲಾಕ್ಕೆ ಅಂದಾಜು 160 ಲಕ್ಷ ರು ವೆಚ್ಚದಲ್ಲಿ ಭಾರತ ಸರ್ಕಾರದ ತ್ವರಿತ ನೀರಾವರಿ ಉಪಯೋಗ ಯೋಜನೆಯಡಿ ಸುಮಾರು 111 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯನ್ನು ಸೋಮವಾರ ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಬಡ ರೈತರ ಅನುಕೂಲಕ್ಕಾಗಿ ನೀರಾವರಿ ಯೋಜನೆಯ ಜಾರಿಗೊಳಿಸುವುದು ತಮ್ಮ ಪ್ರಥಮ ಆದ್ಯತೆಯಾಗಿದೆ. ಅದರಂತೆ ಭೀಮಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಗುರುಮಠಕಲ್ ಕ್ಷೇತ್ರವನ್ನು ಮಾದರಿಯಾಗಿ ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ನಡೆವ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿರುವುದಾಗಿ ಸಚಿವರು ತಿಳಿಸಿದರು. ಜಿಪಂ ಅಧ್ಯಕ್ಷ ಶರಣಿಕಕುಮಾರ ದೋಖಾ, ತಾಪಂ ಅಧ್ಯಕ್ಷ ಶ್ರೀಲಕ್ಷ್ಮಿ ಚಂಡ್ರಕಿ, ಗ್ರಾಪಂ ಅಧ್ಯಕ್ಷ ಭೀಮವ್ವ, ಜಿಪಂ ಸದಸ್ಯ ಅನುಸೂಯ ಬೋರಬಂಡಾ, ಭೀಮರಾಯ ಕಂದಕೂರ, ನೀರಾವರಿ ಇಲಾಖೆ ಸಹಾಯಕ ಅಭಿಯಂತರ ನಿಸೀರ್ ಅಹ್ಮದ್, ಬಸವರಾಜ ಇದ್ದರು. ನ್ಯಾಯವಾದಿ ತಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement