ಜೆಸ್ಕಾಂನಿಂದ ಇಬ್ಬರ ವಜಾ
ಚಿಂಚೋಳಿ: ತಾಲೂಕಿನ ಜೆಸ್ಕಾಂ ಉಪ ವಿಭಾಗ ಚಿಂಚೋಳಿಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿ ಶಾದಿಪುರ ಗ್ರಾಮ ವಿದ್ಯುತ್ ಪ್ರತಿನಿಧಿ ಶ್ರೀನಿವಾಸ ರಾಮಲು ಹಡಪದ್, ಚಿಮ್ಮಾಇದಲಾಯಿ ಗ್ರಾಮ ವಿದ್ಯುತ್ ಪ್ರತಿನಿಧಿ ಮಚೇಂದ್ರರಾವ ಸಂಬಣ್ಣ ದಸ್ತಾಪುರ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನಿಗಮದ ಹಣ ದುರುಪಯೋಗ ಕಾರಣ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ವಂಚನೆ ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಗ್ರಾಹಕರು ಅವರ ಜೊತೆ ನಮ್ಮ ನಿಗಮಕ್ಕೆ ಸಂಬಂಧಪಟ್ಟ ಯಾವುದೇ ವ್ಯವಹಾರ ಮಾಡಕೂಡದು. ವ್ಯವಹಾರ ಇಟ್ಟುಕೊಂಡಲ್ಲಿ ಅದಕ್ಕೆ ಜೆಸ್ಕಾಂ ನಿಗಮ ಜವಾಬ್ದಾರಿಯಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಪಾಲನೆ ಉಪ ವಿಭಾಗದ ಎಇಇ ಪರಮೇಶ್ವರ ಬಿರಾದಾರ ತಿಳಿಸಿದ್ದಾರೆ.