'ಶಾಲೆಗಳಲ್ಲಿ ಡೈಸ್ ಕೋಡ್ ಕಡ್ಡಾಯ'
ಆಳಂದ: ತಾಲೂಕಿನಲ್ಲಿ ನಡೆಯುತ್ತಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ, ಸಮಾಜ ಕಲ್ಯಾಣ ಮತ್ತು ಬಿಸಿಎಂ ವತಿಯಿಂದ ನಡೆಯುವ ಎಲ್ಲ ಶಾಲೆಗಳಲ್ಲಿ ಡೈಸ್ ಮಕ್ಕಳ ಮಾಹಿತಿ ಸಂಗ್ರಹಣೆ ಕಾರ್ಯ ಪ್ರಾರಂಭವಾಗಿದ್ದು, ಶಾಲೆಗೆ ಸಂಬಂಧಪಟ್ಟ ತರಗತಿವಾರು ಮಾಹಿತಿಯನ್ನು ಇಲಾಖೆಯಿಂದ ನಿಗದಿಪಡಿಸಿದ ಡೈಸ್ ಮಕ್ಕಳ ಮಾಹಿತಿ ನಮೂನೆಯಲ್ಲಿ ತುಂಬಿ ಬಿಆರ್ಸಿ ಕಾರ್ಯಾಲಯಕ್ಕೆ 30ರೊಳಗೆ ಸಲ್ಲಿಸಬೇಕು.
2013- 14ನೇ ಸಾಲಿನಲ್ಲಿ ಪ್ರಾರಂಭಿಸಿದ ಹೊಸ ಶಾಲೆಗಳಿಗೂ ಡೈಸ್ ಕೋಡ್ ಸಂಖ್ಯೆ ಇದೇ 30 ರೊಳಗಾಗಿ ಬಿಇಒ ಕಚೇರಿಗೆ ಭೇಟಿ ಮಾಡಿ ಡೈಸ್ಕೋಡ್ ಸಂಖ್ಯೆಯನ್ನು ಪಡೆಯಬೇಕೆ ಇಲ್ಲದೇ ಹೋದಲ್ಲಿ ಅಂಥ ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ತಿಳಿಸಿದ್ದಾರೆ.