ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಕ್ಯಾಂಪಸ್ ಉದ್ಘಾಟನೆ ಕಾರ್ಯಕ್ರಮ ಮತಯಾಚನೆಗೆ ಬಳಕೆ ಸರಿಯಲ್ಲ'

Lingaraj Badiger
Updated On : 2 Dec 2013, 11:44 am

ಗುಲ್ಬರ್ಗ:  ಕರ್ನಾಟಕ ಕೇಂದ್ರೀಯ ವಿವಿ ಹೊಸ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಇಬ್ಬರೂ ಕೇಂದ್ರೀಯ ವಿವಿ ಸ್ಥಾಪನೆ ಯುಪಿಎ ಸರ್ಕಾರದ ಸಾಧನೆ ಎಂದು ಹೇಳುವ ಮೂಲಕ, ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತಯಾಚನೆಯ ಸಮಾರಂಭವನ್ನಾಗಿ ಪರಿವರ್ತಿಸಿದರು ಎಂದು ಆಳಂದ ಕೆಜೆಪಿ ಶಾಸಕ ಬಿ.ಆರ್. ಪಾಟೀಲ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರೀಯ ವಿವಿಗೆ ರಾಷ್ಟ್ರಪತಿಗಳು ಮುಖ್ಯಸ್ಥರು. ಇದು ಸ್ವತಂತ್ರ ಸಂಸ್ಥೆ. ಕೇಂದ್ರದ ಅನುದಾನ ಹೊಂದಿರುವ ಈ ಸಂಸ್ಥೆ ನೇರವಾಗಿ ಕೇಂದ್ರದ, ರಾಷ್ಟ್ರಪತಿಗಳ ನಿಯಂತ್ರಣದಲ್ಲಿರುತ್ತದೆ. ಇಲ್ಲಿನ ಯಾವ ಸಮಾರಂಭದಲ್ಲಿಯೂ ರಾಜಕೀಯ ವರಸೆಯ ಮಾತುಗಾರಿಕೆ ಕೇಳಿ ಬರಲೇಕೂಡದು.
ಆದರೆ ನೂತನ ಕ್ಯಾಂಪಸ್ ಉದ್ಘಾಟನೆಯಲ್ಲಿ ಕೇಂದ್ರ ಸಚಿವ ಖರ್ಗೆ, ರಾಜ್ಯ ಸಚಿವ ದೇಶಪಾಂಡೆ ಇಬ್ಬರೂ ರಾಜಕೀಯ ಲೇಪಿತ ಮಾತುಗಳನ್ನೇ ಆಡಿದರು. ಯುಪಿಎ ಸಾಧನೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಕಾಂಗ್ರೆಸ್ ಪ್ರಚಾರ ಮಾಡಿದ್ದಾರೆ. ಖರ್ಗೆ ಅವರಂತೂ ತಮ್ಮ ಭಾಷಣದ ಕೊನೆಯಲ್ಲಿ ಜನತೆಯ ಆಶೀರ್ವಾದ ಕೇಳಿರುವುದು ಮುಂಬರುವ ಲೋಕಸಭೆ ಚುನಾವಣೆಯ ಪ್ರಚಾರವಾಗದೆ ಇನ್ನೇನು ಆಗಲು ಸಾಧ್ಯ ಎಂದು ಬಿಆರ್ಪಿ ಖಾರವಾಗಿ ಪ್ರಶ್ನಿಸಿದ್ದಾರೆ.
ಖರ್ಗೆ ವ್ಯಂಗ್ಯೋಕ್ತಿಗೆ ಆಕ್ಷೇಪ: ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ಖರ್ಗೆಯವರು ಬಿಆರ್‌ಪಿ ಮಾತುಗಳನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದನ್ನು ಪಾಟೀಲ್ ಆಕ್ಷೇಪಿಸಿದ್ದಾರೆ. ಪ್ರಾದೇಶಿಕ ಅಸಮತೋಲನ ನಿವಾರಣೆ ಅಧ್ಯಕ್ಷ ನಂಜುಂಡಪ್ಪ ವರದಿಯೇ ಕೇಂದ್ರೀಯ ವಿವಿ ಹಿಂದುಳಿದ ಗುಲ್ಬರ್ಗಕ್ಕೆ ಕೊಡುಗೆಯಾಗಿ ನೀಡಿತು ಎಂದು ಬಿಆರ್ ತಮ್ಮ ಮಾತುಗಳಲ್ಲಿ ಹೇಳಿದ್ದರು.
ಆದರೆ ಖರ್ಗೆ ತಮ್ಮ ಮಾತುಗಳಲ್ಲಿ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತ 'ವರದಿ ಅನೇಕರು ಕೊಟ್ಟರೂ ಕೆಲ್ಸ ಮಾಡಿದವರು ಯುಪಿಎ ಸರ್ಕಾರದವರು. ಮಾಡಿದ್ದನ್ನು ಮಾಡಿದ್ದಾರೆ ಅಂತ ಹೇಳಿ' ಎಂದು ವೇದಿಕೆಯಲ್ಲೇ ಬಹಿರಂಗವಾಗಿ ಬಿಆರ್ ಪಾಟೀಲರಿಗೆ ಮಾತಿನಲ್ಲಿ ಕುಟುಕಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement