'ಪ್ರತಿಭಾ ಕಾರಂಜಿಗೆ ಹೆಚ್ಚಿನ ಅನುದಾನ ಅಗತ್ಯ'
ಅಫಜಲ್ಪುರ: ಕ್ಲಸ್ಟರ್ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ತಾಲೂಕಿನ ಕರಜಗಿಯ ವಿವೇಕಾನಂದ ಕಿರಿಯಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜರುಗಿತು.
ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ಸಿ.ಬೆನಕನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವಹಣಗೊಳಿಸುವ ಕಾರ್ಯಕ್ರಮ ಇದಾಗಿದೆ. ಇಂತಹ ಒಳ್ಳೆಯ ಕಾರ್ಯಕ್ರಮಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಬೇಕು ಮತ್ತು ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯ ಒದಗಿಸಿಕೊಡಬೇಕು ಒತ್ತಾಯಿಸಿದರು.
ಶಾಲೆ ಅಧ್ಯಕ್ಷೆ ಭಗವಂತರಾಯ ಬಾಬುರಾವ್ ಅಳ್ಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಸದಸ್ಯೆ ಅನಿತಾ ಅಪ್ಪಾರಾಯ ಅಕ್ಕಲಕೊಟ, ಗ್ರಾಪಂ ಅಧ್ಯಕ್ಷ ವಾಹಿದ್ ಪಾಷಾ ಜಮಾದಾರ, ಅಂಬಣ್ಣ ನರಗೋದಿ, ಗುರುಪಾದ ಕೋಗನೂರ, ಸಿಆರ್ಪಿ ಕರಜಗಿ ಇತರರು ಭಾಗವಹಿಸಿದ್ದರು.