ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭೂರಹಿತರಿಗೆ ಭೂಮಿ ಹಂಚಲು ಆಗ್ರಹ

Lingaraj Badiger
Updated On : 2 Dec 2013, 11:53 am

ಯಾದಗಿರಿ: ಬಗರ್‌ಹುಕಂ ಸಾಗುವಳಿ ಸಕ್ರಮಗೊಳಿಸಿ, ಭೂ ರಹಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಹುಜನ ಪಕ್ಷ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರದಿಂದ ಮೂರು ದಿನಗಳ ಧರಣಿ ಸತ್ಯಾಗ್ರಹ ಶನಿವಾರ ಮುಕ್ತಾಯಗೊಂಡಿತು.
ಜಿಲ್ಲಾಧ್ಯಕ್ಷ ಆನಂದ ಕುಮಾರ ಯಲಗೋಡ ಮಾತನಾಡಿ, ಸಂವಿಧಾನ ಆಶಯದಂತೆ ಸ್ವತಂತ್ರ ಭಾರತದ ಪ್ರತಯೊಬ್ಬ ಪ್ರಜೆಗೆ ಸಮಾನ ಭೂಮಿ ಹಂಚಿಕೆಯಾಗಬೇಕಿತ್ತು. ಲಕ್ಷಾಂತರ ಎಕರೆ ಭೂಮಿ ಹಂಚಿಕೆಯಾಗನೇಕಿತ್ತು. ಲಕ್ಷಾಂತರ ಎಕರೆ ಭೂಮಿ ಕೆಲವೇ ಜನ ಜಮೀನ್ದಾರರ ಕೈಯಲ್ಲಿದೆ. ಭಾರತ ಬಹುಜನರ ಭೂರಹಿತರಾಗಿದ್ದಾರೆ. ಸರ್ಕಾರಗಳು ಶ್ರೀಮಂತ ಮತ್ತು ಬಡವರ ಮಧ್ಯದ ಅಂತರ ಮುಂದುವರೆಸಿದೆ ಎಂದು ಟೀಕಿಸಿದರು.
ಸಕ್ರಮಗೊಳಿಸಿ: ಸರ್ಕಾರ ವಿ. ಬಾಲಾಸುಬ್ರಮಣಿ ಅವರ ಸಮಿತಿ ವರದಿಯನ್ನು ಒಪ್ಪಿಕೊಳ್ಳಬೇಕು. ಈ ವರದಿ ಎಸ್‌ಸಿ ಮತ್ತು ಎಸ್‌ಟಿ, ಹಿಂದುಳಿದ ಜಾತಿಗಳು, ಅರಣ್ಯವಾಸಿಗಳು ಮತ್ತು ಭೂರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವುದನ್ನು ಪ್ರತ್ಯೇಕಗೊಳಿಸಿದೆ. ಈಗಾಗಲೇ ಇವರು ನಮೂನೆ 50, 53ರ ಪ್ರಕಾರ ಅರ್ಜಿ ಸಲ್ಲಿಸಿದ್ದು, ಇವರ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿ ತಕ್ಷಣ ಇವರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ವಿವಿಧ ಬೇಡಿಕೆ: ಸರ್ಕಾರದ ಸೀಲಿಂಗ್ ಲಿಮಿಟ್‌ಗಿಂತ ಹೆಚ್ಚುವರಿ ಭೂಮಿಯನ್ನು ಹೊಂದಿರುವ ಭೂ ಮಾಲೀಕರಿಂದ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಿಕೆ ಮಾಡಬೇಕು. 1991 ಮತ್ತು 1999ರ ಅವಧಿಯಲ್ಲಿ ನಿಗದಿತ ಅಸಮಾನತೆ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮತ್ತು ನಂತರದ ದಿನಗಳಲ್ಲಿ ಬಗರ್‌ಹುಕಂ ಸಾಗುವಳಿ ಮಾಡುತ್ತಿರುವ ಭೂರಹಿತರು ಸಣ್ಣ ಹಿಡುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು. ಸರ್ಕಾರ ತಕ್ಷಣ ಬಗರ್‌ಹುಕಂ ಸಾಗುವಳಿ ಸಕ್ರಮ ಸಮಿತಿಯನ್ನು ನೇಮಕ ಮಾಡಬೇಕು. ರಾಜ್ಯದ ಶೇ. 80ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಸರ್ಕಾರ ತಕ್ಷಣ ಎಲ್ಲಾ ಹಳ್ಳಿ ಮತ್ತು ನಗರ ಪ್ರದೇಶಗಳಿಗೂ ಒಂದು ಕಾಲ ಮಿತಿಯಲ್ಲಿ ಮಿತಿಯಲ್ಲಿ ಸ್ಮಶಾನ ಭೂಮಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಇಸ್ಮಾಲ್ ಖಾದರಿ, ಶಾಭೋದಿನ್ ಶೇಖ್, ರಾಹುಲ್ ಹತ್ತಿಕುಣಿ, ನರಸಿಂಗ್ ಕೊರೆ, ಭೀಮರಾಯ ಎಲ್ಹೇರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement