ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪಂಚ
ಕೆಂಭಾವಿ: ಅಮಾವಾಸ್ಯೆಯ ಪವಿತ್ರ ದಿನವಾದ ಸೋಮವಾರ ಪಟ್ಟಣದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಭಕ್ತರು ಆಗಮಿಸಿ ಪಂಚಲಿಂಗಗಳ ದರ್ಶನ ಪಡೆದರು.
ಕಾರ್ತೀಕ ಮಾಸದಲ್ಲಿ ಸೋಮವಾರ ವಿಶಾಖಾ ನಕ್ಷತ್ರದೊಂದಿಗೆ ಅಮವಾಸ್ಯೆಯಂದು ಪಂಚ ಲಿಂಗಗಳ ದರ್ಶನ ಮಾಡಿದರೆ ಭಕ್ತರ ಇಷ್ಟಾರ್ಥ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕೆಂಭಾವಿಯ ರೇವಣ ಸಿದ್ದೇಶ್ವರ ದೇವಸ್ಥಾನದ ಪಂಚಲಿಂಗಗಳಿಗೆ ಬೆಳಿಗ್ಗೆ ಅಭಿಷೇಕ, ಅರ್ಚನೆ ನಡೆದವು. ಭಕ್ತರು ದೇವಸ್ಥಾನದಲ್ಲಿ ಸರದಿಯಲ್ಲಿ ನಿಂತು ಪಂಚ ಲಿಂಗಗಳ ದರ್ಶನ ಪಡೆದರು.
ಹಿಮವತ್ ಕೇದಾರ ಲಿಂಗ, ಕಾಶೀ ವಿಶ್ವನಾಥ, ಶ್ರೀಶೈಲ ಮಲ್ಲಿಕಾರ್ಜುನ, ಸೇತುಬಂಧ ರಾಮೇಶ್ವರ, ಸೌರಾಷ್ಟ್ರ ಸೋಮನಾಥ ಎಂಬ ಪಂಚಲಿಂಗಗಳು ಒಂದೇ ದೇವಸ್ಥಾನದಲ್ಲಿವೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಮುದ್ದೆಬಿಹಾಳ, ಸಿಂದಗಿ, ದೇವದುರ್ಗ, ಜೇವರ್ಗಿ, ತಾಳಿಕೊಟಿ, ಗೋಲಗೇರಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನ ಅಭಿವೃದ್ಧಿ: ಜಿಲ್ಲೆಯಲ್ಲಿ ಚಾಲುಕ್ಯರ ಕಾಲದಿಂದಲೂ ಇಂತಹುದೊಂದು ಪಂಚಲಿಂಗಗಳ ತಾಣವಿದೆ.
2006, 2009 ಮತ್ತು ಈ ಬಾರಿ ದೇವಸ್ಥಾನ ಸಮಿತಿಯಿ ವತಿಯಿಂದ ಬಂದ ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದ್ದು, ಈಗ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ರೇವಣಸಿದ್ದೆಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಿಂಗನಗೌಡ ಮಾಲಿಪಾಟೀಲ ಹೇಳುತ್ತಾರೆ.
ಕೆಂಭಾವಿಯ ಪಂಚಲಿಂಗಗಳ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪಂಚಲಿಂಗಗಳಿಗೆ ಅಭಿಷೇಕ ನಡೆಯಿತು.