ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಚನ ಶಿಸ್ತುಬದ್ಧವಾಗಿ ಪ್ರಚಾರಗೊಳ್ಳಲಿ

Vishwanath S
Updated On : 3 Dec 2013, 11:35 am

ಚಿಂಚೋಳಿ:  ಶರಣರ ವಚನಗಳ ಪ್ರಚಾರ ತುಂಬಾ ಅಗತ್ಯವಾಗಿವೆ. ವಚನಗಳು ಅತ್ಯಂತ ಶಿಸ್ತುಬದ್ಧವಾಗಿ ಪ್ರಚಾರಗೊಳ್ಳಬೇಕು ಎಂದು ಬಿಜೆಪಿ ಮುಖಂಡ ರಮೇಶ ಯಾಕಾಪುರ ಅಭಿಪ್ರಾಯಪಟ್ಟರು.
ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಸಮಿತಿಯಿಂದ ಏರ್ಪಡಿಸಿದ್ದ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮ್ಮೇಳನಾಧ್ಯಕ್ಷ ಡಾ.ಶಾಂತವೀರ ಸುಂಕದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿ ಡಾ.ಮ.ಗು.ಬಿರಾದಾರ, ಪ್ರೊ.ವಿಜಯಕುಮಾರ್ ಪರೂತೆ, ರೇವಣಸಿದ್ದಪ್ಪ ಮಜ್ಜಗಿ, ಎಸ್.ಎನ್. ದಂಡಿನಕುಮಾರ್, ಲಕ್ಷ್ಮಣ ಆವಂಟಿ, ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ, ಬಸವರಾಜ ಐನೋಳಿ, ವೀರಶೆಟ್ಟಿ ಇಮಡಾಪುರ ಇತರರು ಇದ್ದರು. ಪ್ರೊ. ಶಾಂತವೀರ ಹೀರಾಪುರ ಸ್ವಾಗತಿಸಿದರು. ಗೀತಾರಾಣಿ ಐನೋಳಿ ಕಾರ್ಯಕ್ರಮ ನಿರೂಪಿಸಿದರು. ರೇವಣಸಿದ್ದಯ್ಯ ಸ್ವಾಮಿ ನರನಾಳ ವಂದಿಸಿದರು.
ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಸನ್ಮಾನ
ಚಿಂಚೋಳಿ: ತಾಲೂಕಿನ ಕಲೆ, ಸಾಹಿತ್ಯ, ಜನಪದ, ನಾಟಕ, ಸಹಕಾರ, ಶಿಕ್ಷಣ, ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಅನೇಕರಿಗೆ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕಿನ ಭೋಗಲಿಂಗಪ್ಪ ಶಾಬಾದಿ, ವೀರಶೆಟ್ಟಿಇಮಡಾಪುರ, ಶಾಮರಾವ ಕೋರವಾರ, ಪರ್ವತಯ್ಯ ಸಪ್ಪೆಗೋಳ, ರಾಮಯ್ಯ ಸ್ವಾಮಿ ಐನೋಳಿ, ಬಸವಂತರಾವ ರೊಂಪಳ್ಳಿ ನಿಡಗುಂದಾ, ಸಿದ್ರಾಮಪ್ಪ ಭದ್ರಗೊಂಡ, ಬಾಬಣ್ಣ ಕೆರೋಳಿ, ಜನಾರ್ಧನರೆಡ್ಡಿ ಪಾಟೀಲ್, ನಾಗಶೆಟ್ಟಿ ಐನಾಪುರ ಇತರರನ್ನು ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷ ಡಾ. ಶಾಂತವೀರ ಸುಂಕದ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement