ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಧಿಕಾರ ಕಳೆದುಕೊಂಡ ಗುಲ್ಬರ್ಗ ತಾಪಂ ಅಧ್ಯಕ್ಷ

Lingaraj Badiger
Updated On : 4 Dec 2013, 11:04 am

ಗುಲ್ಬರ್ಗ: ತಾಪಂ ಅಧ್ಯಕ್ಷ ಚನ್ನವೀರಪ್ಪ ಸಲಗರ ವಿರುದ್ಧ ಆಡಳಿತ ಮತ್ತು ಪ್ರತಿಪಕ್ಷಗಳು ಸೇರಿಕೊಂಡು ಮಂಡಿಸಿದ ಅಶ್ವಾಸ ಗೊತ್ತುಗಳಿಗೆ ಜಯ ಸಿಕ್ಕಿದೆ. ಅನುದಾನ ಹಂಚಿಕೆಯಲ್ಲಿನ ತಾರತಮ್ಯವೇ ಅವರು ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು. ನಗರದ ತಾಪಂ ಸಭಾಂಗಣದಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯಲ್ಲಿ ಸ್ವಪಕ್ಷದವರೇ ಅವರ ವಿರುದ್ಧ ಮತ ಹಾಕುವ ಮೂಲಕ ಅವಿಶ್ವಾಸಕ್ಕೆ ಮನ್ನಡೆ ಸಿಗುವಂತೆ ಮಾಡಿದರು. ತಾಪಂ 26 ಸದಸ್ಯರ ಪೈಕಿ ಸಭೆಯಲ್ಲಿ 15 ಸದಸ್ಯರು ಪಾಲ್ಗೊಂಡಿದ್ದರು.
ಅವಿಶ್ವಾಸಕ್ಕೆ ಜಯ: ಇಒ ಎಸ್.ಪಿ. ವಿಜಯೇಂದ್ರ ಅವರು ಅವಿಶ್ವಾಸ ಗೊತ್ತುವಳಿಯನ್ನು ಮತಕ್ಕೆ ಹಾಕಿದರು. ಸಭೆಯಲ್ಲಿ 15 ಸದಸ್ಯರ ಪೈಕಿ 14 ಜನರು ಅವಿಶ್ವಾಸದ ಪರವಾಗಿ ಕೈ ಎತ್ತುವ ಮೂಲಕ ಬೆಂಬಲಿಸಿದರು. ಒಬ್ಬರು ಮಾತ್ರ ಅಧ್ಯಕ್ಷ ಚನ್ನವೀರಪ್ಪ ಪರವಾಗಿ ಮತ ಹಾಕಲು ಕೈ ಎತ್ತಿದರು. ಸಭೆಯಲ್ಲಿ ಸದಸ್ಯರು ಮಂಡಿಸಿದ ಅಶ್ವಾಸಕ್ಕೆ ಜಯ ಸಿಕ್ಕಿದ್ದರಿಂದ ಅಧ್ಯಕ್ಷ ಚನ್ನವೀರಪ್ಪ ಅವರು ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು ಎಇ ವಿಜಯೇಂದ್ರ ಪತ್ರಕರ್ತರಿಗೆ ತಿಳಿಸಿದ್ದಾರೆ.
ಬಂಡಾಯವೆದ್ದಿರುವ 14 ಸದಸ್ಯರಲ್ಲಿ 9 ಬಿಜೆಪಿ, 5 ಕಾಂಗ್ರೆಸ್‌ಗರಿದ್ದಾರೆ. ಅಧ್ಯಕ್ಷ ಚನ್ನವೀರಪ್ಪ ಅಧಿಕಾರ ಕಳೆದುಕೊಂಡಿರುವುದರಿಂದ ಹಾಲಿ ಉಪಾಧ್ಯಕ್ಷೆ ತಾರಾಬಾಯಿ ಬಾಬುರಾವ ಮರಗುತ್ತಿ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನಿಯೋಜಿಸಲಾಗಿದೆ. ಜಿಪಂ ಸಿಇಒ ಅವರಿಗೆ ಪತ್ರ ಬರೆದು ಮಾಹಿತಿ ನೀಡಿ ಮುಂದಿನ ಆರು ತಿಂಗಳ ಅವಧಿಗೆ ಹೊಸ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement