ಅಲ್ಲೂರಿನಲ್ಲಿ ಸ್ವಚ್ಛತೆ ಆಂದೋಲನ
ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಜರುಗಿತು.
ಶಾಲಾ ಮಕ್ಕಳಿಂದ ಸ್ವಚ್ಛತೆ ಘೋಷಣೆಗಳು ಕೂಗುತ್ತಾ ಪ್ರಭಾತಪೇರಿ ನಡೆಸಲಾಯಿತು. ನಂತರ ಪ್ರೌಢಶಾಲೆ ಆವರಣದಲ್ಲಿ ನಡೆದ ಸಮಾರಂಭವನ್ನು ಗ್ರಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಯಂಕಾರೆಡ್ಡಿ ರಾಮತೀರ್ಥ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಗ್ರಾಪಂ ಪಿಡಿಒ ಜಗನಾಥರಡ್ಡಿ ಪಾಟೀಲ್ ಮಾತನಾಡಿ, ಮನುಷ್ಯನಿಗೆ ಮರ್ಯಾದೆ ಎಷ್ಟು ಮುಖ್ಯವೋ, ಶೌಚಾಲಯ ಅಷ್ಟೇ ಮುಖ್ಯ ಎಂದರು.
ಪ್ರೌಢಶಾಲೆ ಮುಖ್ಯಗುರು ವೆಂಕಟರಡ್ಡಿ ಬೆಂಡೆಗುಂಬಳಿ ಸ್ವಚ್ಛತೆ ಬಗ್ಗೆ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಗ್ರಾಪಂ ಉಪಾಧ್ಯಕ್ಷ ದುರುಗಪ್ಪ ಮುಗಟಿ, ಸದಸ್ಯರಾದ ಡಾ. ಬಳಬಟ್ಟಿ ಬಸವರಾಜ ಅಮ್ಮನಗಡೆ, ದುರ್ಜನಪ್ಪ ನಾಟಿಕಾರ, ರಾಮಣ್ಣ ನಾಟಿಕಾರ, ದ್ಯಾವಪ್ಪ ಗಮಗ, ಮಹಾದೇವಪ್ಪ ಕೋನಗೇರಿ, ಮಲ್ಲಣ್ಣ ನಾಟಿಕಾರ, ಭಾಗಮ್ಮ ತಳವಾರ, ಸಿದ್ದಮ್ಮ ಸ್ಥಾವರಮಠ, ಗೌರಮ್ಮ, ನಿಗಾರ ಸುಲ್ತಾನ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಕರ ವಸೂಲಿಗಾರ ರಾಚಯ್ಯ ಸ್ಥಾವರಮಠ ಸ್ವಾಗತಿಸಿ ಅಮೃತ ನಾಟಿಕಾರ ನಿರೂಪಿಸಿದರು.