ಇಂದು ತೊಗರಿ ಬೇಸಾಯದ ತರಬೇತಿ ಕಾರ್ಯಕ್ರಮ
ಹುಣಸಗಿ: ಸಮೀಪದ ದ್ಯಾಮನಹಾಳ ಗ್ರಾಮದಲ್ಲಿ ಡಿ.4ರಂದು ಕೃಷಿ ವಿಶ್ವವಿದ್ಯಾಲಯ ರಾಯಚೂರ ಇವರ ವತಿಯಿಂದ ಹಿಂಗಾರಿ ತೊಗರಿಯ ಬೇಸಾಯ ಪದ್ಧತಿಯ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಅನ್ವೇಷಕ ಡಾ.ಬಿ.ಟಿ ಪೂಜಾರಿ, ಡಾ.ಎ.ಎಸ್. ಚನ್ನಬಸವಣ್ಣ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ದ್ಯಾಮನಹಾಳ ಗ್ರಾಮದ ನಾರಾಯಣರಾವ್ ಕುಲಕರ್ಣಿ ಉದ್ಘಾಟಿಸುವರು. ಪ್ರಭು ನೀಲಗಾರ ಅಧ್ಯಕ್ಷತೆ ವಹಿಸುವರು. ಮುದಿಗೌಡ ಬಿಲ್ಲಾ, ಪ್ರಕಾಶ ಬಂಡೆಪ್ಪನಹಳ್ಳಿ, ಅಧಿಕಾರಿಗಳಾದ ಡಾ.ರಾಜಕುಮಾರ, ಡಾ.ಎಂ.ಎಸ್. ಕಿತ್ತೂರಮಠ, ಅಣ್ಣಾರಾಯ ತಳವಾರ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೋರನಹಳ್ಳಿ ಹೆದ್ದಾರಿಯಲ್ಲಿ ಸಿಗ್ನಲ್ ಅಳವಡಿಸಿ
ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಮೂಲಕ ಹಾಯ್ದು ಹೋಗುವ ಶಹಾಪುರ ಯಾದಗಿರಿ ಹೈವೇಯಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿವೆ. ಸಂಬಂಧಿಸಿದ ಇಲಾಖೆಗಳು ಅಪಘಾತ ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮದ ಯುವ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಭೀಮಾಶಂಕರ ಅಣಬಿ ಸಂಬಂಧಿಸಿದ ಇಲಾಖೆಯ ನಿಷ್ಕಾಳಜಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮೇಲಾಧಿಕಾರಿಗಳಿಗೆ ಈ ಕುರಿತು ಮನವಿಯೊಂದನ್ನು ಸಲ್ಲಿಸಿ, ಹೆದ್ದಾರಿ ಅಪಘಾತಗಳ ತಡೆಗೆ ಯಾವುದೇ ರಕ್ಷಣೆ ಇಲ್ಲ. ಸಂಚಾರಿ ನಿಯಮಗಳ ಸೂಕ್ತ ಮಾಹಿತಿ ಫಲಕಗಳಿಲ್ಲ. ಇದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ತಕ್ಷಣವೇ ಈ ಕುರಿತು ಸ್ಪಂದಿಸಿ ಅಲ್ಲಲ್ಲಿ ಅಪಘಾತದ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಮನವಿ ಮಾಡಿದ್ದಾರೆ.
ಸಕ್ಕರೆ ಲಾರಿ ಪಲ್ಟಿ
ಗುರುಮಠಕಲ್: ಬಾಗಳಕೋಟದಿಂದ ಹೈದ್ರಬಾದಗೆ ತೆರಳುತ್ತಿದ್ದಂತಹ ಸಕ್ಕರೆ ತುಂಬಿದಷ ಲಾರಿಯೂ ಗುರುಮಠಕ ಲ್ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ಸಯಂಕಾಲ ನಡೆದಿದೆ. ಲಾರಿಯಲ್ಲಿ ಅಧಿಕ ಪ್ರಮಾಣದಲ್ಲಿ ದಾಸ್ತನು ಸಾಗಿಸುತ್ತಲ್ಲಿರುವುದು ಮತ್ತ ಚಾಲಕನ ನಿಯಂತ್ರಣ ತಪ್ಪಿರುವುದರಿಂದಾಗಿ ಲಾರಿ ಪಲ್ಟಿಯಾಗಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಗುರುಮಠಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಪಯ ಸಂಭವಿಸಿಲ್ಲ ಚಾಲಕ, ನಿರ್ವಾಹಕರಿಗೆ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿದ್ದು, ಅವರನ್ನು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.